ಯಶಸ್ವಿಯಾಗಿ ಮುಕ್ತಾಯಗೊಂಡ ಶಾಹಬಂದರ ಭಕ್ತಿ ಮಠದ ಜಾತ್ರೇ

Shahbandar Bhakti Math fair concludes successfully

ಯಶಸ್ವಿಯಾಗಿ ಮುಕ್ತಾಯಗೊಂಡ ಶಾಹಬಂದರ ಭಕ್ತಿ ಮಠದ ಜಾತ್ರೇ 

ಯಮಕನಮರಡಿ, 07 : ಹುಕ್ಕೇರಿ ತಾಲೂಕಿನ ಶಾಹಬಂದರ ಗ್ರಾಮದ ಬ್ರಹ್ಮಶ್ರೀ ತವಗದ ಬಾಳಯ್ಯಜ್ಜನವರ ಭಕ್ತಿಮಠದ ಜಾತ್ರೇಯು ದಿ. 6 ಮತ್ತು 7 ರಂದು ವಿಜೃಂಭಣೆಯಿಂದ ಜರುಗಿತು. ದಿ 7 ರಂದು ಅಂಕಲಗಿ ಮಠದ ಪೂಜ್ಯರಾದ ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನಿಡಿದರು. ಅದರಂತೆ ಚಿಕ್ಕಲದಿನ್ನಿ ಗ್ರಾಮದ ಶಿವಲಿಂಗೇಶ್ವರ ಮಠದ ಪೂಜ್ಯರಾದ ಅದೃಶ್ಯಾನಂದ ಮಹಾಸ್ವಾಮಿಗಳು ತೊಲಗಿ ಚಿಕ್ಕಲದಿನ್ನಿ ಉಪಸ್ಥಿತರಿದ್ದು ಶ್ರೀ ಬಾಳಯ್ಯಜ್ಜನವರ ಪವಾಡ ಕುರಿತು ಮಾತನಾಡಿದರು. 

     ಈ ಸಂದರ್ಬದಲ್ಲಿ ಕುಂದರನಾಡಿನ ಅಪಾರ ಬಾಳಯ್ಯಜ್ಜನವರ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ಗುರುವಿನ ಕೃಪೆಗೆ ಪಾತ್ರರಾದರು. ಪ್ರತಿ ವರ್ಷದ ಪದ್ದತ್ತಿಯಂತೆ ಸಾಮೂಹಿಕ ವಿವಾಹ ಸಮಾರಂಭಗಳು ಜರುಗಿದವು. ಶ್ರೀ ಮಠಕ್ಕೆ ಹತ್ತರಗಿ ಏಕಸ ಕಂಪನಿ ರೂವಾರಿಗಳಾದ ಮಹಾಂತೇಶ ಪಾಟೀಲ ಸ್ಥಳೀಯ ಗಣ್ಯರು ಹಾಗೂ ಕರ್ನಾಟಕ ರಕ್ಷಣಾ ವೇಧಿಕೆ ಉಪಾದ್ಯಕ್ಷರಾದ ರಾಜು ನಾಶಿಪುಡಿ ಶಿಕ್ಷಕರಾದ ಪಂಗನ್ನವರ ಉಪಸ್ಥತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ ವಂದಿಸಿದರು. 

 ಈ ಸಂದರ್ಬದಲ್ಲಿ ಭಕ್ತಿಮಠದ ಪೂಜ್ಯರಾದ ಸಂಕಪ್ಪಜ್ಜನವರನ್ನು ಭಕ್ತಿಪೂರ್ವಕವಾಗಿ ಸದಾಶಿವ ಶರಣರು ಸನ್ಮಾನಿಸಿದರು. ಹಾಗೂ ಸಕಲ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.