ಮುಂಬೈ, ಜ.19 : ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್ ಕುಮಾರ್ ರಾವ್ ಹಿರಾನಿ, ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಕರೀನಾ ಕಪೂರ್ ಅವರ ಮೂಖ್ಯಭೂಮಿಕೆಯಲ್ಲಿ ಚಿತ್ರವೊಂದು ಹೊರತರುವ ಸಾಧ್ಯತೆ ಇದೆ.
2018ರಲ್ಲಿ ಶಾರುಖ್, ಜೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ನಂತರ ಬೇರಾವ ಚಿತ್ರಕ್ಕೂ ಶಾರುಖ್ ಸಮ್ಮತಿ ಸೂಚಿಸಿರಲಿಲ್ಲ.
ಇದೀಗ ಹಿರಾನಿ ಅವರ ಮುಂಬರುವ ಚಿತ್ರಕ್ಕೆ ಶಾರುಖ್ ಸಮ್ಮತಿ ಸೂಚಿಸಿದ್ದು, ಅವರೊಂದಿಗೆ ನಟಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತೊಂದು ಬಿಟೌನ್ ನಿಂದ ಕೇಳಿಬರುತ್ತಿದೆ.
ಶಾರುಖ್ ಹಾಗೂ ಕರೀನಾ ಜೋಡಿಯಲ್ಲಿ ಈಗಾಗಲೇ ರಾ.ಒನ್, ಅಶೋಕಾ ಚಿತ್ರಗಳು ತೆರೆಕಂಡಿವೆ.
ಅಲ್ಲದೇ, ಶಾರುಖ್, ಅಲಿ ಅಬ್ಬಾಸ್ ಜಾಫರ್ ಅವರೊಂದಿಗೆ ಬೇರೊಂದು ಚಿತ್ರಕ್ಕಾಗಿಯೂ ಚಚರ್ೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.