ಮುಂಬೈ, ಜ 18: ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ರಾಕ್ ಸ್ಟಾರ್ ರಣಬೀರ್ ಕಪೂರ್ ಜೋಡಿಯಲ್ಲಿ ಚಿತ್ರ ನಿರ್ಮಾಪಕ ಕರಣ್ ಜೋಹರ್ ಚಿತ್ರಮಾಡುವ ಸಾಧ್ಯತೆಗಳು ಕಂಡು ಬಂದಿದೆ.
ಜೀರೋ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ನಂತರ, ಶಾರುಖ್ ಚಿತ್ರರಂಗದಿಂದ ದೂರ ಉಳಿದಿದ್ದು, ಯಾವ ಚಿತ್ರಕ್ಕೂ ಸಮ್ಮತಿ ಸೂಚಿಸಿಲ್ಲ. ಆದರೀಗ, ಶಾರುಖ್, ರಣಬೀರ್ ಕಪೂರ್ ಮುಖ್ಯಭೂಮಿಕೆಯಲ್ಲಿ ಕರಣ್ ಚಿತ್ರ ಮಾಡಲಿದ್ದಾರೆ ಎಂಬ ಮಾತೊಂದು ಬಿಟೌನ್ ನಲ್ಲಿ ಕೇಳಿಬರುತ್ತಿದೆ.
ಆದರೆ, ಅಧಿಕೃತವಾಗಿ ಈ ಕುರಿತು ಯಾವುದೇ ಮಾಹಿತಿ ಹೊರಬಂದಿಲ್ಲ. ಶಾರುಖ್ ಬಹುದಿನಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದಕ್ಕೆ, ಅಭಿಮಾನಿಗಳು ಶಾರುಖ್ ಚಿತ್ರವೊಂದು ಎದುರು ಕಾಣುತ್ತಿದ್ದಾರೆ. ಕಳೆದ ಬಾರಿ ಶಾರುಖ್ ತಮ್ಮ ಜನ್ಮದಿನದಂದು, ಅಭಿಮಾನಿಗಳಿಗೆ 2020ರಲ್ಲಿ ಅವರು ಅಭಿನಯದ ಚಿತ್ರ ಹೊರಬರಲಿದೆ ಎಂದು ಹೇಳಿದ್ದರು.