ಬೆಳಕು ಯೋಜನೆಗೆ ಕತ್ತಲೆಯ ಛಾಯೆ

ಶಶಿಧರ ಶಿರಸಂಗಿ

ಶಿರಹಟ್ಟಿ 14: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕೋಟ್ಯಂತರ ರೂಪಾಯಿಗಳನ್ನು ಪಟ್ಟಣ ಮತ್ತು ನಗರಗಳ ಅಭಿವೃದ್ಧಿಗಾಗಿ ಖಚರ್ುಮಾಡಿ ಪಟ್ಟಣಗಳನ್ನು ಸುಂದರವಾಗಿ ಕಾಣಲು ಬೆಳಕು ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ಆದರೆ ಈ ಯೋಜನೆ ಇಲ್ಲಿ ಸಾಕಾರಗೊಳ್ಳದೇ ವಿಫಲ ಸ್ಥಿತಿಯಲ್ಲಿ ನಡೆಯುತ್ತಿದೆ.

ಶಿರಹಟ್ಟಿ ಪಟ್ಟಣದ ಹೃದಯಭಾಗದಿಂದ ಹಿಡಿದು ಮಾಗಡಿ ರಸ್ತೆಗೆ ಹೊಂದಿಕೊಂಡು ಅಂಚೆ ಕಚೇರಿವರೆಗೆ ಹಾಗೂ ಬೆಳ್ಳಟ್ಟಿ ರಸ್ತೆಯಲ್ಲಿ ಎಸ್ಬಿಐ ಬ್ಯಾಂಕಿನವರೆಗೆ ಇರುವ ರಸ್ತೆಯ ಎರಡೂ ಡಿವೈಡರ್ಗಳಲ್ಲಿ ಅಳವಡಿಸಲಾದ ಕಂಬಗಳಲ್ಲಿನ ಲೈಟುಗಳಿಗೆ ಮಾತ್ರ ಕತ್ತಲೆಯ ಭಾಗ್ಯ ಆವರಿಸಿಕೊಂಡಿದೆ. ಕಳೆದ 2 ವರ್ಷಗಳಿಂದ ಈ ಕಂಬಗಳಲ್ಲಿ ಬೆಳಗಬೇಕಾದ ಲೈಟುಗಳು ಮಾತ್ರ ನಿಜರ್ೀವಗೊಂಡು ಶಿರಹಟ್ಟಿ ಪಟ್ಟಣದ ಈ ರಸ್ತೆಗಳು ಮಾತ್ರ ಕತ್ತಲೆಯ ಗೂಡಾಗಿ ಮಾಪರ್ಾಡಾಗಿವೆ. ಈ ಸಂಬಂಧವಾಗಿ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕವಡೆಕಾಸಿನ ಕಿಮ್ಮತ್ತಿಲ್ಲವೆಂಬಂತಾಗಿದೆ. ಈ ಕಾಮಗಾರಿಯು ಸರಿಯಾಘಿ ಮಾಡದ ಕಾರಣ ಈ ಕಂಬಗಳಲ್ಲಿ ಬೆಳಗಬೇಕಾದ ದೀಪಗಳು ಒಂದ್ಸೊಲ್ಪ ವಿದ್ಯುತ್ ಸರಬರಾಜು ಹೆಚ್ಚುಕಡಿಮೆಯಾದರೆ ಸಾಕು ದೀಪ ಅಳವದಿಸಿದ ಒಂದೆರಡು ದಿನಗಳಲ್ಲಿ ಸುಟ್ಟು ಮತ್ತೇ ಕತ್ತಲೆಯ ಗೂಡಾಗುತ್ತದೆ. 

ಇಲ್ಲಿನ ಪಾದಚಾರಿಗಳು ಮಾತ್ರ ನಮಗೇನು ಸಂಬಂಧವಿಲ್ಲವೆಂಬ ರೀತಿ ತಮ್ಮ ಕೈಯಲ್ಲಿ ಬ್ಯಾಟರಿ ಹಚ್ಚಿಕೊಂಡು ತನ್ನ ಕೆಲಸಮಾಡಿಕೊಂಡು ಹೋಗುವುದು ಸವರ್ೇ ಸಾಮಾನ್ಯವಾಗಿದೆ. ಕಂಬಗಳಲ್ಲಿನ ಬಲ್ಬುಗಳು ಸುಟ್ಟರೆ ಸಾಕು ನಮಗೇನೂ ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿಯವರು ಆಗಲೀ ಇಲ್ಲ ಸಂಭಂಧಿಸಿದ ಇಲಾಖೆಯವರಾಗಲೀ ವತರ್ಿಸುತ್ತಾರೆ.