ಚಚಡಿ ಗ್ರಾಮದಲ್ಲಿ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ

Sewing Training Concluding Ceremony at Chachadi Village

ಚಚಡಿ ಗ್ರಾಮದಲ್ಲಿ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ 

ಯರಗಟ್ಟಿ 16: ವ್ಯವಹಾರ ಬಗ್ಗೆ ಹಾಗೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ವಾವಲಂಬನೆ ಜೀವನ ನಡೆಸುವುದರಗೋಸ್ಕರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ಈ ಮೂರು ತಿಂಗಳು ಹೊಲಿಗೆ ತರಬೇತಿಯನ್ನು ನೀಡಿದ್ದು ಬಹಳ ಆಸಕ್ತಿಯಿಂದ ತರಬೇತಿಯನ್ನು ಪಡೆದುಕೊಂಡ ನಿವೇಲ್ಲರೂ ಸ್ವ ಉದ್ಯೋಗ ಮಾಡಲು ಪ್ರಾರಂಭಿಸಬೇಕು ಮಹಿಳಾ ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಕೇಂದ್ರದ ಸದಸ್ಯರು ಕುಟುಂಬ ನಿರ್ವಹಣೆ, ಆರೋಗ್ಯ ವ್ಯವಹಾರ, ಜ್ಞಾನ ಹೊಂದಿದ್ದು, ತರಬೇತಿಗಳನ್ನು ನೀಡುವ ಉದ್ದೇಶಗಳನ್ನು ತಿಳಿಸುತ್ತಾ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮದ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಎಚ್ ಆರ್ ಲವಕುಮಾರ ಮಾಹಿತಿ ನೀಡಿದರು.  ಅವರು ಸಮೀಪದ ಚಚಡಿ ಗ್ರಾಮದಲ್ಲಿ ಉಚಿತವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿಸಿ ಟ್ರೇಸ್ಟ್‌ (ರಿ) ಯರಗಟ್ಟಿ ಮೂರು ತಿಂಗಳಿಂದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಸಂಘದ ಶ್ರೀಮತಿ ಪವಿತ್ರಾ ಸರಲಿಂಗಮಠ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೈಗೋಳ್ಳುತ್ತಿರುವ ಉತ್ತಮವಾದ ಕಾರ್ಯಕ್ರಮಗಳು ಹಾಗೆಯೇ ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಲಿಗೆ ತರಬೇತಿ ಪಡೆದುಕೊಂಡು ಸ್ವಾವಲಂಭಿಯಾಗಿ ಜೀವನ ನಿರ್ವಹಣೆ ಮಾಡಲು ಈ ಹೊಲಿಗೆ ತರಬೇತಿ ಮಹಿಳೆಯರಿಗೆ ತುಂಭಾ ಉಪಯುಕ್ತ ಅವಕಾಶ ಮಾಡಿಕೊಟ್ಟಂತಾ ಪೂಜ್ಯ ಹೆಗ್ಗಡೆ,ಮಾತೃ ಶ್ರೀಹೇಮಾವತಿ ಅಮ್ಮನವರಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸಿ ಮೂರು ತಿಂಗಳ ಹೊಲಿಗೆ ತರಬೇತಿ ಪಡೆದುಕೊಂಡ ಪ್ರಯೋಜನ ಆಗುತ್ತಿರುವ ಬಗ್ಗೆ ಅಭಿಪ್ರಾಯ ತಿಳಿಸಿದರು. ಕಾರ್ಯಕ್ರಮದಲ್ಲಿ ತರಬೇತಿ ಪಡೆದುಕೊಂಡಂತಾ ಮೂವತ್ತು ಮಹಿಳೆಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.  ಈ ಸಂದರ್ಬದಲ್ಲಿ ಯೋಜನಾಧಿಕಾರಿ ಸತೀಶ ಡಿ, ಯಶವಂತ ಪರಾಡೆ, ಕೃಷ್ಣಾಶೀಂಗ ರಜಪೋತ, ಅಧ್ಯಕ್ಷತೆ ರಾಜೇಶ್ವರಿ ತೋಟಗಿ, ಮೇಲ್ವೀಚಾರಕರು ಮಂಜುಳಾ ದಂಡಪ್ಪೆನವರ, ಸೇವಾ ಪ್ರತೀನೀಧಿ ಮಾಹಾದೇವಿ ಪತ್ತಾರ, ಜ್ಞಾನ ವಿಕಾಸ  ಸಮನ್ವಯಾಧಿಕಾರಿ ನಿಶಾ ನಾಯ್ಕ, ಕೇಂದ್ರದ ಸದಸ್ಯರು, ಒಕ್ಕೋಟದ ಪದಾಧಿಕಾರಿಗಳು ಮುಂತಾದವರು ಇದ್ದರು.