ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶಕವಾಗಿವೆ : ಎಂ.ಆರ್‌.ಷಣ್ಮುಖ.

Sewalal Maharaj's philosophy is a guide for everyone's life : MR Shanmukh.

ಕಂಪ್ಲಿ 15 :  ತಾಲೂಕು ಆಡಳಿತ ಹಾಗೂ ಸತ್ಯ ಸೇವಾಲಾಲ್ ಟ್ರಸ್ಟ್‌ ಸಹಯೋಗದಲ್ಲಿ ಸಂತ ಸೇವಾಲಾಲ್ ಅವರ 286ನೇ ಜಯಂತಿಯನ್ನು ಸಂಭ್ರಮ ಸಡಗರದಿಂದ ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.

ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರೇಡ್‌-2- ತಹಶೀಲ್ದಾರ್ ಎಂ.ಆರ್‌.ಷಣ್ಮುಖ,ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಶ್ರೀ ಸತ್ಯ ಸೇವಾಲಾಲ್ ಟ್ರಸ್ಟ್‌ನವರು ಪುಷ್ಪ ನಮನ ಅರ​‍್ಿಸಿದರು.   ಗ್ರೇಡ್‌-2- ತಹಶೀಲ್ದಾರ್ ಎಂ.ಆರ್‌.ಷಣ್ಮುಖ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶಕವಾಗಿವೆ. ಅವರ ಆದರ್ಶಗಳ ಪರಿಪಾಲನೆಯೊಂದಿಗೆ ನೆಮ್ಮದಿಯ ಬದುಕಿಗೆ ಅಣಿಯಾಗಬೇಕು. ನಾಡಿಗೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿದ್ದಾರೆ. ಸೇವಾಲಾಲ್ ಸಮಾಜದವರು ಮುಖ್ಯವಾಹಿನಿಗೆ ಬರಲು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರ ಭವಿಷ್ಯ ರೂಪಿಸಲು ಪೋಷಕರು ಮುಂದಾಗಬೇಕು ಎಂದರು. ಶ್ರೀ ಸತ್ಯ ಸೇವಾಲಾಲ್ ಟ್ರಸ್ಟ್‌ ಅಧ್ಯಕ್ಷ ಆರ್‌.ಕೆ.ಗವಿಸಿದ್ದಪ್ಪ ಮಾತನಾಡಿ, ಸೇವಾಲಾಲ್ ಮಹಾರಾಜರು ಅನೇಕ ಪವಾಡಗಳನ್ನು ಮಾಡುವ ಮೂಲಕ ಜಗತ್ತಿಗೆ ಬೆಳಕು ನೀಡಿದ್ದಾರೆ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸನ್ಮಾರ್ಗದತ್ತ ನಡೆಸಲು ಸಾಧ್ಯ. ಈ ದಿನ ತಾಲೂಕು ಕಛೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಿದ್ದು, ಇದಕ್ಕೂ ಮುನ್ನ ತಾಲ್ಲೂಕಿನ ಸಣಾಪುರ ಗ್ರಾ.ಪಂ.ವ್ಯಾಪ್ತಿಯ ಅರಳ್ಳಿ ತಾಂಡಾದಲ್ಲಿರುವ ಶ್ರೀ ಸೇವಾಲಾಲ್ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಅಲ್ಲಿಂದ ತಹಸಿಲ್ದಾರ್ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿ ಜಯಂತಿಯನ್ನು ಆಚರಿಸಿದ್ದೇವೆಂದರು.

ಈ ಸಂದರ್ಭದಲ್ಲಿ ಉಪ ತಹಸಿಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೇದಾರರಾದ ಪಂಪಾಪತಿ, ರಮೇಶ್, ಎಫ್‌ಡಿಎ ಮಾಲತೇಶ್ ದೇಶಪಾಂಡೆ,ಮೌನೇಶ್, ಗ್ರಾಮಾಡಳಿತಾಧಿಕಾರಿ ಲಕ್ಷ್ಮಣನಾಯಕ್, ಸೇವಾಲಾಲ್ ಸಮಾಜದ ಮುಖಂಡರಾದ ಆರ್‌.ಕೆ.ಶ್ರೀಶಿನಿವಾಸ್,ಭೀಮಪ್ಪ ರಾಥೋಡ್, ಗಂಗಾಧರ ಚೌಹಾಣ್,ದೇವರಾಜ್,ಬಸವರಾಜ್ ಪಮ್ಮಾರ್, ಹನುಮಂತಪ್ಪ ಚೌಹಾಣ್, ತ್ಯಾವರೆಪ್ಪ ಚೌಹಾಣ್, ಪುಂಡಲೀಕಪ್ಪ ಡಾವೋ, ಗ್ರಾ.ಪಂ. ಸದಸ್ಯೆ ಜ್ಯೋತಿ ಗುಂಡಯ್ಯ ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಪಾಲ್ಗೊಂಡಿದ್ದರು.