ಪ್ಯಾರಾಸಿಟಮಲ್ ಮಾತ್ರೆಗಳ ಮಾರಾಟದ ಮೇಲೆ ತೀವ್ರ ನಿಗಾಯಿಡಿ: ಡಿಸಿ ಪಾಟೀಲ

ವಿಜಯಪುರ 11: ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ಗಳ ಮೂಲಕ  ಸಾರ್ವಜನಿಕರಿಗೆ ಜ್ವರಕ್ಕೆ ಸಂಬಂಧಪಟ್ಟಂತೆ ಮಾರಾಟಮಾಡುವ ಪ್ಯಾರಾಸಿಟಮಲ್ ಮಾತ್ರೆಗಳ ಬಗ್ಗೆ ಸವಿವರವನ್ನು ಇಟ್ಟುಕೊಂಡು ಜಿಲ್ಲಾ ಔಷಧಿಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆಯಾ ಅಂಗಡಿ ಮಾಲಿಕರಿಗೆ ಸಲಹೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೋವಿಡ್-19 ನಿಯಂತ್ರಣದ ಉದ್ದೇಶದೊಂದಿಗೆ ಇನ್ನೂ ಹೆಚ್ಚು ಪರಿಣಾಮಕಾರಿ ಕ್ರಮವಾಗಿ ಜಿಲ್ಲೆಯ ಸುಮಾರು 900ಕ್ಕೂ ಹೆಚ್ಚು ಔಷಧಿ ಅಂಗಡಿಗಳ ಮೂಲಕ ಜ್ವರಕ್ಕೆ ಸಂಬಂಧಪಟ್ಟ ಪ್ಯಾರಾಸಿಟಮಲ್ ಮಾತ್ರೆ ಮಾರಾಟ, ಜ್ವರದಿಂದ ಬಳಲುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಇಂತಹ ಕ್ರಮಕೈಗೊಂಡಿದ್ದು, ಆಯಾ ವೈದ್ಯಾಧಿಕಾರಿಗಳು ನೀಡುವ ಪ್ರಿಸ್ಕ್ರೀಪ್ಷನ್, ರೋಗಿಯ ಹೆಸರು, ಮೋಬೈಲ್ ಸಂಖ್ಯೆಯುಳ್ಳ ಸಮಗ್ರ ಮಾಹಿತಿಯನ್ನು ದಾಖಲಿಕರಣಗೊಳಿಸುವುದರ ಜೊತೆಗೆ ಔಷಧಿ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರುವಂತೆ ಸಲಹೆ ನೀಡಿದ್ದಾರೆ. 

ಕೊರೊನಾ ವೈರಸ್ ಹರಡುವಿಕೆಯ ಮುಖ್ಯ ಲಕ್ಷಣಗಳಾಗಿರುವ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಗಳ ಬಗ್ಗೆ ತೀವ್ರ ನಿಗಾ ಇಡುವ ಅವಶ್ಯಕತೆ ಇದ್ದು, ಒಂದು ವೇಳೆ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಅಂತಹವರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಗಳನ್ನು ಗುರುತಿಸಲು ನೆರವಾಗುವ ದೃಷ್ಠಿಯಿಂದ ಈ ಕ್ರಮ ಕೈಗೊಂಡಿದ್ದು, ಆಯಾ ಮೆಡಿಕಲ್ ಶಾಪ್ ಮಾಲಿಕರು ನಿರ್ಲಕ್ಷವಹಿಸದೆ ಸೂಕ್ತ ಮಾಹಿತಿ ಇಟ್ಟುಕೊಳ್ಳಬೇಕು. ಔಷಧಿ ನಿಯಂತ್ರಣಾಧಿಕಾರಿಗಳು ಕೂಡಾ ಈ ಕುರಿತು ಸೂಕ್ತ ತಪಾಸಣೆ ಮತ್ತು ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಹೈಡ್ರಾಕ್ಷಿಕ್ಲೋರೊಕ್ವೀನ್(ಎಚ್.ಸಿ.ಕ್ಯೂ) ಮಾತ್ರೆಗಳನ್ನು ಕೋವಿಡ್-19 ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಅಧಿಕಾರಿಗಳು, ಸಿಬ್ಬಂಧಿಗಳು, ಆಶಾಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕತರ್ೆಯರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆದ್ಯತೆ ಮೇಲೆ ಪೂರೈಸಲು ಉದ್ದೇಶಿಸಲಾಗಿದೆ. ಅದರಂತೆ ವಿಶೇಷವಾಗಿ ವೈದ್ಯಕೀಯ ಸಲಹೆ ಆಧಾರದ ಮೇಲೆ ಈ ಮಾತ್ರೆ ನೀಡಲಾಗುತ್ತಿದೆ. ಅದರಂತೆ ವೈದ್ಯಕೀಯ ತುತರ್ು ಉಪಚಾರದ ಮೇಲೆ ಬೇರೆ ಜಿಲ್ಲೆಗೆ ತೆರಳಲು ನಿಗದಿತ ಪಾಸ್ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕಡ್ಡಾಯಗೊಳಿಸಿದೆ. ಹೋಗಿ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಹೋಮ್ಕ್ವಾರಂಟೈನ್ ಸಹ ಮಾಡಲು ನಿದರ್ೇಶಿಸಿದೆ. ಬೇರೆ ಜಿಲ್ಲೆಗಳಿಂದ ಬರುವವರು ಕೂಡಾ ಆಯಾ ಸಕ್ಷಮ ಪ್ರಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಗಬರ್ಿಣಿ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಮತ್ತು ಪ್ರತಿ ತಾಲೂಕಾ ವ್ಯಾಪ್ತಿಯಲ್ಲಿ ತಲಾ ಒಂದರಂತೆ ''ನಗು-ಮಗು'' ವಾಹನದ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಬೇಕು, ಇದರಿಂದ ಗಭರ್ಿಣಿ ಮಹಿಳೆಯರಿಗೆ ಆಸ್ಪತ್ರೆಗೆ ಬರಲು ಅನುಕೂಲವಾಗುವುದರ ಜೊತೆಗೆ ವಾಪಸ್ ತೆರಳಲು ಕೂಡಾ ಸಹಕಾರಿಯಾಗಲಿದ್ದು, ಇದಕ್ಕೆ ಬೇಕಾದ ಅನುದಾನ ಮತ್ತು ಇಂಧನ ವೆಚ್ಚದ ಸೌಲಭ್ಯವನ್ನು ಕಲ್ಪಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಭಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮೂಲಕ ಶೇ.100ರಷ್ಟು ಪಡಿತರ ಧಾನ್ಯ ತಕ್ಷಣ ವಿತರಣೆಯಾಗಬೇಕು. ವಿಶೇಷವಾಗಿ ವಿಜಯಪುರ ನಗರ ಮತ್ತು ಅತಿ ಕಡಿಮೆ ಸಾಧನೆ ತೋರಿರುವ ನ್ಯಾಯಬೆಲೆ ಅಂಗಡಿಗಳ ಬಗ್ಗೆ ಪರಿಶೀಲಿಸಿ ಆದ್ಯತೆಯ ಮೇಲೆ ಸಾಮಾಜಿಕ ಅಂತರ ನಿಯಮ ಪಾಲನೆಯೊಂದಿಗೆ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಉಪವಿಭಾಗಾಧಿಕಾರಿಗಳು ಈ ಕುರಿತು ತೀವ್ರ ನಿಗಾಇಡಬೇಕು. ಗಂಭಿರ ಸ್ವರೂಪದ ದೂರುಗಳನ್ನು ಆಯಾ ತಹಸೀಲ್ದಾರರು ಖುದ್ದಾಗಿ ನಿರ್ವಹಿಸಿ ಸಾರ್ವಜನಿಕರಿಗೆ ನಿರವಾಗುವಂತೆ ಅವರು ಸೂಚಿಸಿ ಕೇಂದ್ರ ಸಕರ್ಾರದಿಂದ ಜಾರಿಯಲ್ಲಿರುವ ಜನಧನ ಹಾಗೂ ಪ್ರಧಾನಮಂತ್ರಿ ಕಿಸಾನ್ಸಮ್ಮಾನ ಯೋಜನೆಯಡಿ ಫಲಾನುಭವಿಗಳಿಗೆ ಮಾಸಿಕ ಸಹಾಯ ಧನ ಸಾಮಾಜಿಕ ಅಂತರ ಮತ್ತು ಪಾರದರ್ಶಕವಾಗಿ ಹೆಚ್ಚಿನ ಕೌಂಟರ್ಗಳ ಸ್ಫಾಪನೆ ಮೂಲಕ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಪೂವರ್ಾಹ್ನವರೆಗೆ 451 ಜನ ವಿದೇಶ ಮತ್ತು ಇತರ ಕಡೆಯಿಂದ ಬಂದ ಬಗ್ಗೆ ವರದಿಯಾಗಿದೆ. 258 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 138 ಜನರು 15 ರಿಂದ 28 ದಿನಗಳ ರಿಪೋಟರ್ಿಂಗ್ ಅವಧಿಯಲ್ಲಿದ್ದಾರೆ. 55 ಜನರು ಹೋಮ್ಕ್ವಾರಂಟೈನ್ ನಲ್ಲಿದ್ದಾರೆ. 32 ಜನರನ್ನು ಸಕರ್ಾರಿ ಐಸೋಲೇಷನ್ದಲ್ಲಿದ್ದು, ಈವರೆಗೆ ಕಳುಹಿಸಲಾದ 92 ಜನರ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 65 ಜನರ ವರದಿ ನೆಗೆಟಿವ್ ಬಂದಿದ್ದು, 27 ಜನರ ವರದಿ ಇನ್ನೂ ಬರಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಜಿಲ್ಲಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಲೇರಿಯಾ ಸವರ್ೇಕ್ಷಣಾಧಿಕಾರಿಗಳು ಸಕರ್ಾರದ ನಿದರ್ೇಶನದ ಅನ್ವಯ ಯಾವುದೇ ದೂರುಗಳಿಗೆ ಅವಕಾಶ ನೀಡದೆ ದೈನಂದಿನ ಕೆಲಸಗಳನ್ನು ನಡೆಸುವಂತೆ ತಿಳಿಸಿದ ಅವರು ಸವರ್ೇಕ್ಷಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮಾರಿ ಸುರೇಖಾ, ಜಿಲ್ಲಾ ಸವರ್ೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಡಾ. ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಪ್ರಾಣೇಶ ಜಾಹಗೀರದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.