ಹಲವಾರು ಗ್ರಾ.ಪಂ. ಪಿಡಿಓಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ: ಬಳ್ಳಾರಿ


ಲೋಕದರ್ಶನ ವರದಿ

ಬ್ಯಾಡಗಿ25: ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಲಿರುವ ಹಲವಾರು ಗ್ರಾ.ಪಂ. ಪಿಡಿಓಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನತೆಯ ಮಾತಿಗೆ ಅಸಡ್ಡೆ ತೋರುತ್ತಿದ್ದು ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಮಸ್ಯೆಗಳು  ಉದ್ಭವಿಸುತ್ತಿದೆ. ಆದ್ದರಿಂದ ಅವರ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳುವಂತೆ ತಾಲೂಕಾ ಪಂಚಾಯತ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಪಕ್ಷ ಭೇದ ತೊರೆದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಆಗ್ರಹಿಸಿದ ಘಟನೆ ಮಂಗಳವಾರ ಜರುಗಿತು.

     ಸ್ಥಳೀಯ ತಾ.ಪಂ.ಸುವರ್ಣಸೌದಧ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ನೂತನ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರನ್ನು ಸನ್ಮಾನಿಸುವ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ತಾ.ಪಂ.ಸದಸ್ಯರು ಪ್ರಸ್ತಾಪಿಸಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ನಾನೂ ಕೂಡಾ ಗ್ರಾಮೀಣ ಪ್ರದೇಶದಿಂದ ಬಂದವನಾಗಿದ್ದು, ಈಗಾಗಲೇ ಜಿ.ಪಂ.ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಪಿಡಿಓಗಳ ಚಲನವಲನವನ್ನು ನಾನೂ ಕೂಡಾ ಕಂಡವನಾಗಿದ್ದು, ಗ್ರಾಮೀಣ ಪ್ರದೇಶದ ಜನತೆಗೆ ತೊಂದರೆ ಕೊಡುವ ಪ್ರವೃತ್ತಿಯನ್ನು ತಾಲೂಕಿನ ಪಿಡಿಓಗಳು ಮುಂದವರಿಸಿಕೊಂಡು ಹೋದಲ್ಲಿ ಅವರ ಮೇಲೆ ನಿಧರ್ಾಕ್ಷಿಣ್ಯ  ಕ್ರಮ ಕೈಕೊಳ್ಳಲಾಗುವುದೆಂದು ಎಚ್ಚರಿಸಿದರು. 

  ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಯನಿರ್ವಹಕ ಅಧಿಕಾರಿ ಎ.ಟಿ.ಜಯಕುಮಾರ ಅವರೊಂದಿಗೆ ಮಾತನಾಡಿ ತಾವುಗಳು ಹಿರಿಯ ಅಧಿಕಾರಿಗಳಿದ್ದು, ತಮ್ಮ ಸಿಬ್ಬಂದಿಯ ಮೇಲೆ ಹಿಡಿತವನ್ನು ಕಳೆದುಕೊಂಡಿದ್ದು, ಇದರಿಂದಾಗಿ ತಾಲೂಕಾ ಪಂಚಾಯತ ಹಾಗೂ ಗ್ರಾಮ ಪಂಚಾಯತ ಮೇಲೆ ಸಾಕಷ್ಟು ಪರಿಣಾಮವಾಗುತ್ತಲಿದೆ. ಮುಂದಿನ ದಿನಗಳಲ್ಲಿ ತಮ್ಮ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ತಾಲೂಕಿನ ಸಮಸ್ಯೆಗಳನ್ನು ಪರಿಹರಿಸವಲ್ಲಿ ಮುಂದಾಗುವಂತೆ ಬುದ್ಧಿಮಾತು ಹೇಳಿದರು.

      ಶಾಸಕರನ್ನು ಸನ್ಮಾನಿಸಿದ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೊಟಿ ಮಾತನಾಡಿ ತಾಲೂಕಾ ಪಂಚಾಯತ ಅಭಿವೃದ್ಧಿಗೆ ಎಲ್ಲ ಪಕ್ಷದ ಸದಸ್ಯರು ಒಂದಾಗಿ ಯಾವುದೇ ಭಿನ್ನಾಭಿಪ್ರಾಯ ತಾಳದಂತೆ ಶ್ರಮಿಸುತ್ತಲಿದ್ದೇವೆ. ನಮ್ಮ ಎಲ್ಲಾ ತಾಲೂಕಾ ಪಂಚಾಯತ ಸದಸ್ಯರಿಗೆ ಮುಂದಿನ ದಿನಗಲ್ಲಿ ಶಾಸಕರು ಸಹಕಾರವನ್ನು ನೀಡುವಂತೆ ಮನವಿ ಮಾಡಿಕೊಂಡರು.

     ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ. ಸ್ಥಾಯಿ ಸಮಿತಿ ಅಧ್ಯಕ್ಷೆ ಪಾರವತೆವ್ವ ಮುದಕಮ್ಮನವರ, ಶಾಂತಣ್ಣ ದೊಡ್ಡಮನಿ, ಯಲ್ಲನಗೌಡ್ರ ಕರಿಗೌಡ್ರ, ಜಗದೀಶ ಪೂಜಾರ, ಪ್ರಭುಗೌಡ್ರ ಪಾಟೀಲ, ಪೂಣರ್ಿಮಾ ಆನ್ವೇರಿ, ಗುಡ್ಡಪ್ಪ ಕೋಳೂರ, ಶಶಿಕಲಾ ಹಲಗೇರಿ, ಮಹೇಶಗೌಡ್ರ ಪಾಟೀಲ, ಸಾವಿತ್ರಾ ಕೋಡದ ಧುರೀಣರಾದ ಶಿವಬಸಪ್ಪ ಕುಳೇನೂರ, ಚಂದ್ರಶೇಖರ ಆನ್ವೇರಿ, ವೀರೇಂದ್ರ ಶೆಟ್ಟರ, ರಾಮಣ್ಣ ಉಕ್ಕುಂದ, ಚಂದ್ರಣ್ಣ ಮುಚಟ್ಟಿ, ತಿರಕಪ್ಪ ನಾಯಕ ಇದ್ದರು.