ಮುಂಚಿತವಾಗಿ ಸೂಕ್ತ ಖರೀದಿ ಬೆಲೆ ನಿಗದಿಗೊಳಿಸಿ: ಅಧ್ಯಕ್ಷ ಬೆಳಗುರ್ಕಿ

ಗದಗ 04: ರಾಜ್ಯದ ರೈತರ ಬೆಳೆಗಳಿಗೆ ಮುಂಚಿತವಾಗಿ ಸೂಕ್ತ ಖರೀದಿ ಬೆಲೆ ನಿಗದಿಗೊಳಿಸಿ ಸಂಚಾರಿ ಖರೀದಿ ಕೇಂದ್ರ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ರೈತರ ಬೆಳೆಗಳಿಗೆ ನ್ಯಾಯ ಸಮ್ಮತ ಬೆಲೆ ದೊರಕಿದಂತಾಗುತ್ತದೆ ಎಂದು  ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು. 

ಗದಗ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಹಾಗೂ ಐಸಿಎಆರ್ ಕೆ.ಎಚ್.ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ  ಸಹಯೋಗದಲ್ಲಿ ನಡೆದ ಪಡಿತರ ವ್ಯವಸ್ಥೆಯಲ್ಲಿ ಅವಶ್ಯಕವಿರುವ ಹಿಂಗಾರಿ ಜೋಳ ಉತ್ಪಾದಿಸಿ ವ್ಯವಸ್ಥೆ ಸಧೃಡಗೊಳಿಸುವ ಒಂದು ದಿನದ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2020-21ನೇ ಸಾಲಿನ ಜನಗಣತಿ ಪ್ರಕಾರ ಸುಮಾರು 7 ಕೋಟಿ ಜನಸಂಖ್ಯೆ ನಿರೀಕ್ಷಿಸಲಾಗಿದ್ದು, ಸದ್ಯ 4 ಕೋಟಿ 60 ಲಕ್ಷ ಕಾಡರ್ುದಾರರು ಇದ್ದಾರೆ. ಹೀಗಾಗಿ ಭವಿಷ್ಯದಲ್ಲಿ  42 ಲಕ್ಷ ಟನ್ ಅಕ್ಕಿ, 10 ಲಕ್ಷ ಟನ್ ಜೋಳ ಹಾಗೂ 10 ಲಕ್ಷ ಟನ್ ರಾಗಿ ಪಡಿತರದಾರರಿಗೆ ಬೇಕಾಗುತ್ತದೆ. ಪಡಿತರದಾರರಿಗೆ ಕೇವಲ ಅಕ್ಕಿ ಮತ್ತು ಗೋಧಿ ನೀಡುತ್ತಿರುವುದರಿಂದ ಕೊಟ್ಟ ಅಕ್ಕಿಯನ್ನು ಮಾರಾಟ ಮಾಡಿ ಜೋಳ ಖರೀದಿ ಮಾಡುತ್ತಿರುವ ಪ್ರಸಂಗಗಳು ಕಂಡು ಬರುತ್ತಿದ್ದು, ಅಕ್ಕಿ ಮತ್ತು ಗೋಧಿಯ ಜೊತೆಗೆ ಜೋಳ ವಿತರಿಸಬೇಕು. ಇದರಿಂದ ಜೋಳದ ಉತ್ಪಾದನೆ ಹೆಚ್ಚುತ್ತಲ್ಲದೇ, ಪಡಿತರ ವ್ಯವಸ್ಥೆ ಸಧೃಡಗೊಳಿಸಿದಂತಾಗುತ್ತದೆ. ಬೆಳೆಯ ಉತ್ಪಾದನೆಗಿಂತ ಮೊದಲೇ ಬೆಲೆ ನಿಗದಿಯಾದರೆ ಮಾರುಕಟ್ಟೆ ಹಾಗೂ ಉತ್ಪಾದನೆಗೆ ನಿದರ್ಿಷ್ಟತೆ ಬರುತ್ತದೆ. ಬೆಳೆ ವಿಮೆ ಯೋಜನೆಯಲ್ಲಿ  ನೂನ್ಯತೆಗಳಿರುವುದರಿಂದ ಯೋಜನೆಯ ಫಲ ಎಲ್ಲರಿಗೂ ದೊರಕುತ್ತಿಲ್ಲ ಎಂದು ಹನುಮನಗೌಡ ಬೆಳಗುಕರ್ಿ ನುಡಿದರು.

ತೋಟಗಾರಿಕಾ ಉತ್ಪಾದಕ ಸಂಘದ ಅಧ್ಯಕ್ಷ ಜೆ.ಆರ್.ಓದುಗೌಡರ ಮಾತನಾಡಿ, ಇಡೀ ವಿಶ್ವಕ್ಕೆ ಕೃಷಿಯ ಪಾಠ ಹೇಳಿದ ರಾಷ್ಟ್ರ ನಮ್ಮದು. ರೈತರಿಂದ ಖರೀದಿ ಮಾಡಿದ ಉತ್ಪಾದನೆ ರಪ್ತಾಗುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬೇರೆ ದೇಶಗಳಿಗೆ ಅವಶ್ಯಕವಿರುವ ಬೆಳೆ ಬೆಳೆದು ರಪ್ತು ಮಾಡಿದರೆ ರೈತರ ಆದಾಯ ತನ್ನಿಂದ ತಾನೇ ದ್ವಿಗುಣಗೊಳ್ಳುತ್ತದೆ ಎಂದರು.

ಜಂಟಿ ಕೃಷಿ ನಿದರ್ೇಶಕ ರುದ್ರೇಶಪ್ಪ ಟಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಡಿತರರಿಗೆ ಅಕ್ಕಿ, ಗೋಧಿ ವಿತರಿಸುತ್ತಿರುವುದರಿಂದ ಜೋಳದ ಉತ್ಪಾದನೆ 80 ಸಾವಿರ ಹೆಕ್ಟೆರ್ನಿಂದ 60 ಸಾವಿರ ಹೆಕ್ಟೆರ್ಗೆ ಇಳುವರಿ ಕಡಿಮೆಯಾಗಿದೆ. ಹೀಗಾಗಿ 20-30 ವರ್ಷಗಳಿಂದಿರುವ ಜೋಳದ ಹಳೆ ತಳಿಯ ಬದಲಾಗಿ ಪರ್ಯಾಯ ಹೊಸ ತಳಿ ಬರಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಉಪ ನಿದರ್ೇಶಕ ವಿರೇಶ ಹುನಗುಂದ, ಹುಲಕೋಟಿ ಕೃಷಿ ವಿಜ್ಞಾನ ಮುಖ್ಯಸ್ಥ ಎಲ್.ಜಿ.ಹಿರೇಗೌಡರ, ಸಹಾಯಕ ಕೃಷಿ ನಿದರ್ೇಶಕ ಮಲ್ಲಯ್ಯ ಕೊರವನವರ, ಕೃಷಿ ವಿಜ್ಞಾನ ಕೇಂದ್ರದ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.