ಶಶಿಧರ ಶಿರಸಂಗಿ
ಶಿರಹಟ್ಟಿ 04: ಕೊರೊನಾ ಹಾವಳಿ ಇಡೀ ದೇಶಾದ್ಯಂತ ವ್ಯಾಪಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರೂ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಬೇಕೆಂದು 21 ದಿನಗಳ ಕಾಲ ಲಾಕ್ಡೌನ್ ಆದೇಶ ಹೊರಡಿಸಿ ಪ್ರತಿಯೊಬ್ಬ ಪ್ರಜೆಯ ಜೀವವನ್ನು ರಕ್ಷಿಸಲು ಮನೆಯೊಳಗೆ ಭದ್ರವಾಗಿ ಕುಳಿತುಕೊಳ್ಳುವಂತೆ ಮಾಡಿದ್ದರೂ ಸಹ, ಜನರು ಮಾತ್ರ ಈ ಆದೇಶವನ್ನು ದಿಕ್ಕರಿಸಿ ತಮ್ಮ ಜೀವದ ಹಂಗನ್ನೂ ಲೆಕ್ಕಿಸದೇ ಬೀದಿ ಬೀದಿಗಳಲ್ಲಿ ತಿರುಗಾಡುವುದನ್ನು ನಾವೆಲ್ಲರೂ ಮಾಧ್ಯಮದ ಮೂಲಕವೂ ಇಲ್ಲ ಪೋಲೀಸರು ಕೊಟ್ಟ ಲಾಠಿ ಏಟಿನಿಂದಲೋ ತಿಳಿದಿರಬೇಕು.
ಈ ಲಾಕ್ಡೌನ್ ಯಶಸ್ವಿಯಾಗಲು ದೇಶ ಹಾಗೂ ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸಕರ್ಾರ ಪೋಲೀಸ್ ಇಲಾಖೆಯೊಂದಿಗೆ ಕರೋನ ಹರಡದಂತೆ ಕಪ್ಯರ್ೂ ನಿಯಮವನ್ನು ಜಾರಿಗೆ ತಂದಿದೆ. ಈ ಕಪ್ಯರ್ೂ ಸಮಯದಲ್ಲಿ ಯಾರಾದರೂ ಅಡ್ಡಾಡುವುದು ಇಲ್ಲವೇ ಮಾಸ್ಕ್ ಇಲ್ಲದೇ ಸರಿಯಾದ ಕಾರಣ ಇಲ್ಲದೇ ಅಡ್ಡಾಡುವುದನ್ನು ಕಂಡರೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಲಾಠಿ ಬೀಸಿ ಬಿಸಿ ಮುಟ್ಟಿಸುವುದು ಗ್ಯಾರಂಟಿ.
ಆದರೆ ಇಲ್ಲಿ ಹಾಗಲ್ಲ, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಪೋಲೀಸ್ ಸಿಬ್ಬಂದಿಗೆ ಭಾರವನ್ನು ನೀಡದೇ ಸ್ವತಃ ಗ್ರಾಮ ಪಂಚಾಯಿತಿ ಆಡಳಿತ ವರ್ಗವೇ ಹೆಚ್ಚಿನ ಮುತವಜರ್ಿ ವಹಿಸಿ ಸ್ಥಳೀಯವಾಗಿ ಕೊರೋನಾ ಹಾವಳಿಯನ್ನು ತಡೆಯಲು ಗ್ರಾಮ ಪಂಚಾಯ್ತಿ ಸದಸ್ಯರೇ ಸ್ವತಃ ಲಾಠಿ ಹಿಡಿದು ಗಸ್ತು ತಿರುಗುತ್ತಿದ್ದಾರೆ. ಇದರ ಪರಿಣಾಮವಾಗಿ ಇಡೀ ಊರಿಗೆ ಊರೇ ಸ್ತಬ್ಧವಾಗಿದೆ. ಗ್ರಾಮದ ಒಬ್ಬನೂ ಮನೆಯ ಹೊರಗಡೆ ಬಾರದ ರೀತಿಯಲ್ಲಿ ಕಾಯ್ದುಕೊಂಡಿದ್ದಾರೆ. ಇದರಿಂದ ಒಡೂ ಬೆಳ್ಳಟ್ಟಿ ಗ್ರಾಮ ಜನರಿಲ್ಲದೇ ಬಿಕೋ ಅನ್ನುತ್ತಿದೆ. ಸ್ವತಃ ಗ್ರಾಮ ಪಂಚಾಯ್ತಿಯ ಸದಸ್ಯರು, ಪಿಡಿಒ, ಉಳಿದೆಲ್ಲ ಸಿಬ್ಬಂದಿಗಳು ಈ ಲಾಕ್ಡೌನ್ನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಇದರಿಂದ ಜನರೆಲ್ಲ ತಾವೇ ಸ್ವಯಂ ಪ್ರೇರಿತರಾಗಿ ಮನೆಯ ಹೊರಗೆೆ ಬರದಂತೆ, ಜನಜಂಗುಳಿ ಸೇರಿದ ಹಾಗೆ ಜಾಗೃತಿ ವಹಿಸಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಇತರರಿಗೆ ಮಾದರಿಯಾಗುತ್ತಿದ್ದಾರೆ. ಇದರ ಜೊತೆ ಜೊತೆಗೆನೇ ಗ್ರಾಮ ಪಂಚಾಯಿತಿ ಇಡೀ ಗ್ರಾಮವನ್ನೇ ಲಾಕ್ ಡೌನ್ ಮಾಡಿದ್ದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಯಾವುದೇ ರೀತಿಯ ವ್ಯಾಪಾರ ವಹಿವಾಟು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಹೊಗಡೆಯಿಂದ ಗ್ರಾಮಕ್ಕೆ ಬರುವವರನ್ನು ತಡೆದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡ ಬಳಿಕ ಅವರನ್ನು ಸ್ವಲ್ಪ ದಿನ ಹೊರಗಡೆಗೆ ತಿರುಗಾಡದಂತೆ ಮನೆಯಲ್ಲಿಯೇ ಕಾಳ ಕಳೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಒಂದು ವ್ಯವಸ್ಥೆಗೆ ಸ್ಥಳೀಯ ಆಶಾ ಕಾರ್ಯಕತರ್ೆಯರು ಕೈಜೋಡಿದ್ದಾರೆ.
ಇದನ್ನೆಲ್ಲಾ ನೋಡಿದರೆ ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯ ಸರ್ವ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳನ್ನು ನೋಡಿದರೆ ಸಿಸ್ತನ್ನು ಕಾಪಾಡಲು ಪೋಲೀಸ್ ಇಲಾಖೆಗಿಂತ ನಾವೇನೂ ಕಮ್ಮಿಯಿಲ್ಲ ಎಂದು ತೋರಿಸಿರುವುದನ್ನು ನೋಡಿದರೆ ಕೇಂದ್ರ ಹಾಗೂ ರಾಜ್ಯ ಸಕರ್ಾರ ಈ ಗ್ರಾಮ ಪಂಚಾಯಿತಿಯ ಪ್ರಾಮಾಣಿಕ ಸೇವೆ ಹಾಗೂ ಸಿಸ್ತನ್ನು ಪರಿಗಣಿಸಿ "ರಾಜ್ಯ ಅತ್ತ್ಯುತ್ತಮ ಗ್ರಾಮ ಪಂಚಾಯಿತಿ" ಎಂಬ ಬಿರುದನ್ನು ನೀಡಿದರೆ ಇದೊಂದು ರಾಜ್ಯಕ್ಕೇ ಮಾದರಿ ಗ್ರಾಮ ಪಂಚಾಯಿತಿಯಾಗಿ ಹೆಸರು ಮಾಡುವಲ್ಲಿ ಸಾರ್ಥಕವಾದೀತೆಂದರೆೆ ತಪ್ಪಾಗಲಾರದು.