ಲಯನ್ಸ ಸಂಸ್ಥೆಯನ್ನು ಪ್ರಗತಿ ಪಥದತ್ತ ಮುನ್ನಡೆಸಲು ಸೇವಾ ಕಾರ್ಯ ವ್ಯಾಪ್ತಿ ಹೆಚ್ಚಿಸಬೇಕು: ಮಾಣೇಕ

Service scope should be increased to take Lions organization on the path of progress: Maneka

ಜಮಖಂಡಿ 24: ಲಯನ್ಸ ಸಂಸ್ಥೆಯನ್ನು ಪ್ರಗತಿ ಪಥದತ್ತ ಮುನ್ನಡೆಸಲು ಸೇವಾ ಕಾರ್ಯದ ವ್ಯಾಪ್ತಿಯನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿಸಬೇಕು, ನಮ್ಮಲ್ಲಿ ಲಭ್ಯವಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಲಯನ್ಸ್‌ ಜಿಲ್ಲಾ ಗವರನ್ನರ್ ಮನೋಜ ಮಾಣೇಕ ಹೇಳಿದರು. 

ನಗರದ ರಮಾ ನಿವಾಸದಲ್ಲಿ ನಡೆದ ಲಯನ್ಸ ಸಂಸ್ಥೆಯ ನಿರ್ದೇಶಕ ಮಂಡಳಿ ಸಭೆಯಲ್ಲಿ ಮಾತನಾಡಿದರು. 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರವೀಣ ಮೈಗೂರ ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡ ಸೇವಾ ಕಾರ್ಯಗಳ ಬಗ್ಗೆ ವರದಿ ನೀಡಿದರು.  

ಲಯನ್ಸ ಅಧ್ಯಕ್ಷ ಚಿನ್ಮಯ ಜಿರಲಿ, ರಾಜಶೇಖರ ಹೊಸಟ್ಟಿ, ಸುನೀಲ ಮುರುಗೋಡ, ನಾಗೇಶ ಚಾಳಸೆ, ರಾಜೇಂದ್ರ ನಾಯಕ, ವಿಜಯ ಕಟಗಿ, ಪ್ರಕಾಶ ಚೌರಡ್ಡಿ, ಚಿದಾನಂದ ಚಟ್ಟೇರ, ಲತಾ ಚಾಳಸೆ, ಲಕ್ಮೀ ನಾಯಕ, ಸಂಗಮೇಶ ಕೌಜಲಗಿ, ಆನಂದ ಚೌಗಲಾ ಸೇರಿದಂತೆ ಇತರರು ಇದ್ದರು.