ಸೇವಾ ಸಂಸ್ಥೆಯ ಮುಂಗಡ ಪತ್ರ ಮಂಡನೆ
Service organization budget presentation
ಬೆಳಗಾವಿ 20: ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಆರ್ ಅಂಬೇಡ್ಕರ್ ಸೇವಾ ಸಂಸ್ಥೆ ಬೆಳಗಾವಿ ಜೂ. 18ರಂದು ಮುಂಜಾನೆ 11 ಗಂಟೆಗೆ ಕೇಂದ್ರ ಕಚೇರಿಯಲ್ಲಿ ಸೇವಾ ಸಂಸ್ಥೆಯ 10ನೇ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಕರೆಯಲಾಗಿತ್ತು,
ಸಭೆಯ ಅಧ್ಯಕ್ಷತೆಯನ್ನು ಭಾಗಣ್ಣಾ ಬಿ ತಳವಾರ ಇವರು ವಹಿಸಿದ್ದರು. ಎಲ್ಲ ಸದಸ್ಯರನ್ನು ಸ್ವಾಗತಿಸಿ ಬುದ್ಧ ವಂದನೆ ಉದ್ಘಾಟನೆ ನೆರವೇರಿಸಿದರು. ಹಿಂದಿನ ಸಾಲಿನ ವರದಿಯನ್ನು ಓದಿ ಹೇಳಲಾಯಿತು. 2024-25ನೇ ಸಾಲಿನ ಲೆಕ್ಕ ಪತ್ರಗಳನ್ನು ಓದಿ ಹೇಳಲಾಯಿತು. ಹಾಗೂ 2025-26 ಸಾಲಿನ ಮುಂಗಡ ಪತ್ರ ಮಂಡಿಸಲಾಯಿತು. ಎಲ್ಲಾ ವಿಷಯಗಳಿಗೆ ಸರ್ವ ಸದಸ್ಯರ ಸಲಹೆಯಂತೆ ಅನುಮೋದನೆ ಪಡೆಯಲಾಯಿತು. ನಂತರ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಆರ್ ಅಂಬೇಡ್ಕರ್ ಸೇವಾ ಸಂಸ್ಥೆಯ ಅಜೀವ ಸದಸ್ಯತ್ವ ಪಡೆದವರಿಗೆ ರಸೀದಿ ನೀಡಿ ಶಾಲು ಹೋದಿಸಿ ಸತ್ಕರಿಸಲಾಯಿತು.
ಮುಂಬರುವ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ, ಶೈಕ್ಷಣಿಕ, ಸಮಾಜದ ಜನರ ಕುಂದು ಕೊರತೆಗಳ ನಿವಾರಣೆ ಹಾಗೂ ಆರ್ಥಿಕವಾಗಿ ಸಹಾಯ ನೀಡಿ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡೊಣ ಅಂತ ತಿರ್ಮಾನ ಮಾಡಲಾಯಿತು.
ಕಾರ್ಯಕ್ರಮದ ಸಭೆಯಲ್ಲಿ ಅಧ್ಯಕ್ಷರಾದ ಬಿ. ಬಿ ತಳವಾರ, ಉಪಾಧ್ಯಕ್ಷರು ಕಲ್ಲಪ್ಪಾ ಎಂ ಚೌಗಲೆ, ಆಡಳಿತ ಮಂಡಳಿ ಸದಸ್ಯರಾದ ಬಾಬು ಜ. ಮೇತ್ರಿ, ಧರ್ಮೆಂದ್ರ ಆರ್.ಕಾತೇಕರ, ರಾಜು ಟಿ ಗಣಾಚಾರಿ, ವಿರುಪಾಕ್ಷ ಎಫ್ ಮೇತ್ರಿ, ಸಂಜಯ ಕೊಲಕಾರ. ರುದ್ರ್ಪ ಬಿ ಹಲಗೇಕರ, ಎಸ್ ಎಸ್ ಕಾಂಬಳೆ ಮುಂತಾದವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 