ಲೋಕದರ್ಶನ ವರದಿ
ಸತಿಪತಿಗಳೊಂದಾಗಿ ಮಾಡುವ ಸೇವೆ ಸಾರ್ಥಕ: ಚನ್ನಬಸವ ಗುರೂಜಿ
ಮಹಾಲಿಂಗಪುರ 17: ಸತಿಪತಿಗಳೊಂದಾಗಿ ಮಾಡುವ ಸೇವೆ ಅದ್ಬುತ, ಚನ್ನಬಸು ಹುರಕಡ್ಲಿ ದಂಪತಿಗಳು ಒಂದಾಗಿ ಮಾಡುತ್ತಿರುವ ಸಮಾಜ ಸೇವೆ ಸಾರ್ಥಕ ಎಂದು ಹಂದಿಗುಂದದ ಚನ್ನಬಸವ ಗುರೂಜಿ ಹೇಳಿದರು.
ಸ್ಥಳೀಯ ಬಸವನಗರದ ಸಮುದಾಯ ಭವನದಲ್ಲಿ ಸಿ.ಎಂ.ಹುರಕಡ್ಲಿ ಫೌಂಡೇಶನ್ ವತಿಯಿಂದ ಜರುಗಿದ ಮಹಿಳೆಯರಿಗೆ ಉಚಿತ ಆರಿ ವರ್ಕ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಯ ಮತ್ತು ಉಸಿರು ಬದುಕಿನ ಅತ್ತಮೂಲ್ಯ ಅಂಶಗಳು, ಉಸಿರು ನಿಂತ ಮೇಲೆ ಮಸಣಕ್ಕೆ ದಾರಿ. ಬದುಕಿನ ನಿರ್ಮಾಣ ಅಥವಾ ನಿರ್ನಾಮ ನಮ್ಮ ಕೈಯಲ್ಲಿಯೇ ಇದೆ. ಸಮಸ್ಯೆಗಳಿಗೆ ಅಜ್ಞಾನವೇ ಕಾರಣ ಆಸೆಗಳನ್ನು ತ್ಯಜಿಸಿ ಬದುಕನ್ನು ಸುಂದರವಾಗಿಸಿಕೊಳ್ಳಿ ಎಂದರು.
ಪುರಸಭೆ ಉಪಾಧ್ಯಕ್ಷೆ ಶೀಲಾ ರಾಜೇಶ್ ಬಾವಿಕಟ್ಟಿ,ಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಮುಖಂಡರಾದ ಹನಮಂತ ಕೊಣ್ಣೂರ, ಬಸವರಾಜ ಪೂಜಾರಿ ಮಾತನಾಡಿ, ಚನ್ನಬಸು ಹುರಕಡ್ಲಿಯವರ ಸಮಾಜ ಸೇವೆ ಮಾದರಿ ಅವರ ಸೇವಾ ಕಾರ್ಯಕ್ಕೆ ಸದಾ ಕೈಜೋಡಿಸುವುದಾಗಿ ಮತ್ತು ಪ್ರತಿ ಗ್ರಾಮದಲ್ಲೂ ಇಂತಹ ಶ್ರೇಷ್ಠ ತರಬೇತಿಗಳು ನಡೆಯಲಿ ಎಂದರು.
ತರಬೇತುದಾರರಾದ ತಾಯವ್ವ ಪಾಟೀಲ, ರಶ್ಮಿ ಬಳ್ಳೂರ, ಉಮಾ ಪೂಜಾರಿ 80 ದಿನಗಳಿಂದ ಉಚಿತವಾಗಿ ಜರುಗಿದ ತರಬೇತಿಯಲ್ಲಿ ಮಹಿಳೆಯರಿಗೆ ಸೀರೆ, ಜಂಪರ್, ಚೂಡಿದಾರದ ಮೇಲೆ ಆರಿ ವರ್ಕ್ ಮಾಡಿ ಸ್ವಾವಲಂಬನೆ ಜೀವನ ನಡೆಸುವ ಕೌಶಲ್ಯ ಕಲಿಸಿದರು.
ಭಾಜಪ ರೈತ ಮೋರ್ಚಾ ಅಧ್ಯಕ್ಷ ಸಂಜು ಬಾರಕೋಲ, ಮುಖಂಡರಾದ ಶ್ರೀಶೈಲಪ್ಪ ಬಾಡನವರ, ಮಹಾದೇವ ಟಿರಿಕಿ, ಪ್ರಕಾಶ ಬಾಡನವರ, ಗಣೇಶ ಶಿರೋಳ, ಎಂ.ಡಿ.ಆನಂದ, ಭೀಮಶಿ ಪೂಜಾರಿ, ಬಸವರಾಜ ಗಿರಿಸಾಗರ, ಸವಿತಾ ಹುರಕಡ್ಲಿ, ಸದಾಶಿವ ಮುನ್ನೊಳ್ಳಿ, ಮಲ್ಲಪ್ಪ ತೇಲಿ, ಮಹೇಶ ಮಣ್ಣಯ್ಯನವರಮಠ ಇತರರಿದ್ದರು. ಮಹಿಳೆಯರಿಗೆ ಪ್ರಮಾಣ ಪತ್ರ ಮತ್ತು ಸಾಧಕರಿಗೆ ಸನ್ಮಾನ ಜರುಗಿತು
ಬಾಕ್ಸ್:
ಮಹಿಳೆಯರ ಸ್ವಾವಲಂಬನೆಯಿಂದ ಸಮಾಜ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ಫೌಂಡೇಶನ್ ವತಿಯಿಂದ ನಿರಂತರ ಸ್ವಾವಲಂಬನೆಯ ತರಬೇತಿಗಳನ್ನು ನೀಡುತ್ತಿದ್ದು ಅವರಿಗೆ ಕಾರ್ಮಿಕ ಇಲಾಖೆಯ ಕಾರ್ಡ್ ಕೊಡಿಸಿ ಸರ್ಕಾರದ ಸೌಲಭ್ಯ ಪಡೆಯುವಂತೆ ಮಾಡಿ ಆರ್ಥಿಕ ಸದೃಢತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
ಚನ್ನಬಸು ಹುರಕಡ್ಲಿ
ಪುರಸಭಾ ಮಾಜಿ ಉಪಾಧ್ಯಕ್ಷ ಹಾಗೂ ಸಿ.ಎಂ.ಹುರಕಡ್ಲಿ ಫೌಂಡೇಶನ್ ಸಂಸ್ಥಾಪಕ