ಇಳಕಲ್22: ಸರಕಾರ ಸಾರಿಗೆ ಸಂಸ್ಥೆ ಇರುವದು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಲು ಕಾರಣ ತಾವುಗಳು ಸಾರ್ವಜನಿಕರಿಗೆ ಇನ್ನೂ ಅತ್ಯುತ್ತಮ ಸೇವೆ ಸಲ್ಲಿಸಿ ಎಂದು ಶಾಸಕ ದೊಡ್ಡನಗೌಡ ಜಿ. ಪಾಟೀಲ ಹೇಳಿದರು.
ಬುಧವಾರ ಇಳಕಲ್ ಸಾರಿಗೆ ಇಲಾಖೆಯ ಘಟಕದಲ್ಲಿ ಎರಡು ನೂತನ ಬಸ್ಗಳಿಗೆ ಪ್ರಾರಂಭದ ಪೂಜೆ ಮಾಡಿ ಮಾತನಾಡಿ ಇಳಕಲ್ ನಗರದ ಜನರ ಬಹು ದಿನದ ಬೇಡಿಕೆಯಾಗಿದ್ದ ಇಳಕಲ್-ಬೆಂಗಳೂರ ನಾನ್ ಎಸಿ ಸ್ಲಿಪರ್ ಬಸ್ ಅಧಿಕೃತವಾಗಿ ಪ್ರಾರಂಭವಾಯಿತು. ಇದರೊಂದಿಗೆ ಇಳಕಲ್-ಮುಂಬೈ ನೂತನ ಬಸ್ ಸಹ ಪ್ರಾರಂಭಿಸಲಾಯಿತು.
ಈ ಎರಡು ಬಸ್ಗಳನ್ನು ಪ್ರಾರಂಭಿಸಲು ಹೋರಾಟ ಮಾಡಿದವರಿಗೆ ಇಳಕಲ್ ಜನತೆ ಅಭಿನಂದನೆ ತಿಳಿಸಬೇಕು, ಈ ವಿಷಯವಾಗಿ ಅವರು ಅನೇಕ ಸಲ ಬಸ್ ಘಟಕ ಬಂದ ಮಾಡುಲು ಮುಂದಾಗಿದ್ದರು ಅಲ್ಲದೆ ತಮ್ಮ ಹತ್ತಿರ ಅನೇಕ ಸಲ ಮನವಿ ಕೊಟ್ಟಿದ್ದರು, ನಾನು ಈ ವಿಷಯವಾಗಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಈ ಬಸ್ಗಳನ್ನು ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಬಾಗಲಕೋಟ ಜಿಲ್ಲೆಯಲ್ಲಿಯೆ ಇಳಕಲ್ ಬಸ್ ಘಟಕ ಅತ್ಯುತ್ತಮ ಸೇವೆ ಸಲ್ಲಿಸುವದರ ಜೊತೆ ಹೆಚ್ಚು ಆದಾಯವನ್ನು ತರುತ್ತಿದೆ ಇದಕ್ಕೆ ಕಾರಣ ಇಲ್ಲಿಯ ಘಟಕ ವ್ಯವಸ್ಥಾಪಕರು ನೌಕರ ವರ್ಗ, ನಿವರ್ಾಹಕ ಹಾಗೂ ಚಾಲಕರು ಎಂದರೆ ತಪ್ಪಲ್ಲ ಈ ಘಟಕಕ್ಕೆ ಇನ್ನೂ 6 ಹೊಸ ಬಸ್ ಬರಬೇಕು ಅವುಗಳು ಬಂದ ನಂತರ ಇನ್ನೂ ಹೊಸ ಮಾರ್ಗಗಳನ್ನು ಪ್ರಾರಂಭ ಮಾಡಲಾಗುವದು ಹಾಗು ಬಸ್ ನಿಲ್ದಾಣವನ್ನು ಸ್ವಚ್ಚವಾಗಿಡಲು ಅಧಿಕಾರಿಗಳಿಗೆ ಸೂಚಿಸಿದರು.
ಸಮಾರಂಭದಲ್ಲಿ ಬಿ.ಜೆ.ಪಿ ತಾಲೂಕಾ ಅಧ್ಯಕ್ಷ ಮಹಾಂತಗೌಡ ತೊಂಡಿಹಾಳ, ಹಿರಿಯರಾದ ದಿಲಿಪ ದೇವಗಿರಕರ, ಶಾಮಸುಂದರ ಕರವಾ, ಮಾದೇವಸಾ ಕಾಟವಾ, ಮಹಾಂತೇಶ ಮಠ, ಸಂಗಮೇಶ ಚಳಗೇರಿ ಹಾಗು ಇತರರು ಉಪಸ್ತಿತರಿದ್ದರು. ಸಾರಿಗೆ ಇಲಾಖೆಯ ಘಟಕದ ಅಧಿಕಾರಿ ಸ್ವಾಗತಿಸಿದರು. ಇಳಕಲ್-ಬೆಂಗಳೂರ ಬಸ್ ಇಳಕಲ್ ಬಸ್ ನಿಲ್ದಾಣದಿಂದ ರಾತ್ರಿ 9-30ಕ್ಕೆ ಬಿಡುವದು, ಬೆಂಗಳೂರಿನಲ್ಲಿ ರಾತ್ರಿ 10-15ಕ್ಕೆ ಬಿಡುವದು ಕಾರಣ ಇಳಕಲ್ ನಗರದ ಎಲ್ಲ ಜನತೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು.