ಕಾರು, ಬೈಕ್-ಡಿಕ್ಕಿ ಮೂವರಿಗೆ ಗಂಭೀರ ಗಾಯ

 ಲೋಕದರ್ಶನ ವರದಿ

ಬಳ್ಳಾರಿ24: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಪೆಟ್ರೋಲ್ ಬಂಕ್ ಹತ್ತಿರದ ವೀರುಪಾಪುರ ಸ್ಥಳದಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. 

   ಚಿಕ್ಕಜಗಳೂರುನಿಂದ ಹಗರಿಬೊಮ್ಮನ ಹಳ್ಳಿಗೆ ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ್, ಪಿ.ಎಂ ವಿಕಾಸ್, ಪಿ.ಎಂ ಪ್ರಭಾಸ್ ಎಂಬುವ ಮೂವರಿಗೆ ಗಂಭೀರ ಗಾಯವಾಗಿದೆ. 

  ಇನ್ನು ಕಾರಿನಲ್ಲಿ ನಾಗಪ್ಪ ಕಮತಿ ಮತ್ತು ಶಿವಲೀಲಾ ಬೆಂಗಳೂರಿನಿಂದ ಮಾನ್ವಿ ಕಡೆ ಪ್ರಯಾಣ ಮಾಡುತ್ತಿದ್ದರು. ಕೂಡ್ಲಿಗಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲಾಗಿದ್ದರು ಮೂವರಿಗೆ ಗಂಭೀರ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಲಾಗಿದೆ ಎಂದು ಕೂಡ್ಲಿಗಿ ಠಾಣೆಯ ಪೊಲೀಸರು ತಿಳಿಸಿದರು. 

 ಇನ್ನು ಘಟನೆ ನಡೆದ ಸ್ಥಳಕ್ಕೆ ಕೂಡ್ಲಿಗಿ ಠಾಣೆಯ ತಿಮ್ಮಣ್ಣ ಎಸ್. ಚಾಮನೂರು ಮತ್ತು ಸಿಬ್ಬಂದಿಗಳು ಆಗಮಿಸಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.