ನವದೆಹಲಿ, ಏ 27,ದೇಶದ ಆರ್ಥಿಕತೆ ಮೇಲೆ ಕೊರೊನಾ ಸೋಂಕು ತೀವ್ರ ಬಹಳ ಪರಿಣಾಮ ಬೀರಿದೆ , ಭಾರೀ ಪ್ರಮಾಣದಲ್ಲಿ ಆರ್ಥಿಕ ಉದ್ಯೋಗ ನಷ್ಟವುಂಟಾಗಿದೆ. ಈ ಸಮಸ್ಯೆಯಿಂದ ಪಾರಾಗಲು ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಅಮೆರಿಕಾ-ಭಾರತ ವ್ಯಾಪಾರ ಮಂಡಳಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅತನು ಚಕ್ರವರ್ತಿ ಅವರಿಗೆ ಮತ್ತು ಆರ್ಥಿಕ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅಧಿಕಾರಿಗಳ ತಂಡಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಸಲಹೆ ನೀಡಲಾಗಿದೆ.ಹೆಚ್ಚುವರಿಯಾಗಿ ವೆಚ್ಚ ಭರಿಸಲು ಮತ್ತು ಹಣ ಸಂಗ್ರಹ ಮಾಡಲು ಸರ್ಕಾರ ದೇಶಿ ಮಾರುಕಟ್ಟೆಯಲ್ಲಿ ತೆರಿಗೆ ಮುಕ್ತ ಕರೋನ ಬಾಂಡ್ ಗಳನ್ನು ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ. ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಾಲದ ನೆರವು , ಆರೋಗ್ಯ ಕ್ಷೇತ್ರದ ಸಂಸ್ಥೆಗಳಿಗೆ ಹಣಕಾಸು ನೆರವು, ರೈತರ ಆದಾಯ ಹೆಚ್ಚಿಸಲು ಅಲ್ಪಾವಧಿ ದೀರ್ಘಾವಧಿ ಕ್ರಮ, ವಿಮಾನಯಾನ ವಲಯಕ್ಕೆ ಅಗತ್ಯ ಬೆಂಬಲ, ಸಾಲ ದೇಶಿ ಕೈಗಾರಿಕಾ ವಲಯದ ಸುಸ್ಥಿರತೆಗೆ ವೇತನ ಪಾವತಿ ಮತ್ತು ಉದ್ಯೋಗ ಉಳಿಸಿಕೊಳ್ಳಲು ಕಂಪನಿಗಳಿಗೆ ಅಗತ್ಯ ನೆರವು ನೀಡುವ ಕುರಿತು ಅನೇಕ ಸಲಹೆ ನೀಡಲಾಗಿದೆ.