ಪ್ರತ್ಯೇಕ ರೈಲ್ವೆ ಬಜೆಟ್ ರದ್ದು: ಪಿಯೂಷ್ ಗೋಯಲ್ ಸಮರ್ಥನೆ

ನವದೆಹಲಿ 12: ಸಾಮಾನ್ಯ  ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸುವುದು ಸರಿಯಲ್ಲ  ಹಾಗೂ ಪ್ರತ್ಯೇಕ  ರೈಲ್ವೆ ಬಜೆಟ್ ತೆಗೆದು ಹಾಕಿದ  ಸರಕಾರದ  ತೀರ್ಮಾನವನ್ನೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಬಲವಾಗಿ  ಸಮರ್ಥನೆ ಮಾಡಿಕೊಂಡಿದ್ದಾರೆ. 

 ಕೇಂದ್ರದ ಈ ಕ್ರಮವನ್ನು   ದೇಶವೇ  ಮುಕ್ತಕಂಠದಿಂದ  ಪ್ರಶಂಸೆ ಮಾಡಿದೆ ಎಂದೂ  ರೈಲ್ವೆ ಸಚಿವರು ಲೋಕಸಭೆಯಲ್ಲಿ  ರೈಲ್ವೆ  ಇಲಾಖೆ ಬೇಡಿಕೆ ಮೇಲಿನ ಚರ್ಚೆಗೆ  ಉತ್ತರ ಕೊಡುವ ಸಮಯದಲ್ಲಿ    ಹೇಳಿದ್ದಾರೆ . ರೈಲ್ವೆ ಬಜೆಟ್ ಈ ವರೆಗೆ ಸಂಪೂರ್ಣವಾಗಿ ರಾಜಕೀಯ ಬಜೆಟ್ ಆಗಿತ್ತು" ಎಂದು ಅವರು ಅಭಿಪ್ರಾಯಪಟ್ಟರು.  

  ಅಂತಹ ಬಜೆಟ್ ರಾಜಕೀಯ ಕಾರಣಗಳಿಗಾಗಿ  ಮಾಡಲ್ಪಟ್ಟಿತ್ತು ಮತ್ತು ಇಡೀ ದೇಶ ಮತ್ತು ಸಂಸದರನ್ನು ದಾರಿ ತಪ್ಪಿಸುವ  ಗುರಿಯನ್ನು ಮಾತ್ರ ಹೊಂದಿತ್ತು ಎಂದು ಅವರು ಹೇಳಿದರು. 

  ಚುನಾವಣೆಯಲ್ಲಿ ಗೆಲ್ಲಲು ಮತ್ತು ಕ್ಷೇತ್ರಗಳ ಜನರನ್ನು ಸಂತೋಷಪಡಿಸಲು"ಹೀಗೆ ಮಾಡಲಾಗುತ್ತಿತ್ತು   ತಮ್ಮ ಭಾಷಣದಲ್ಲಿ, ರೈಲ್ವೆ ಇಲಾಖೆಯಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಅವರು  ಹಿಂದಿನ ಇಬ್ಬರು ಸಚಿವರಾದ  ಸುರೇಶ್ ಪ್ರಭು ಮತ್ತು ಡಿ.ವಿ  ಸದಾನಂದ ಗೌಡ ಅವರ ಕೆಲಸವನ್ನೂ ಅವರು  ಶ್ಲಾಘಿಸಿ,  ರೈಲ್ವೆಗೆ ಹೊಸ ದೃಷ್ಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಅಭಿನಂದಿಸಿದರು. 2007 ರಿಂದ ಯುಪಿಎ ಆಡಳಿತವು ಸರಕು ಕಾರಿಡಾರ್ ಯೋಜನೆಯನ್ನು ಪ್ರಾರಂಭಿಸುವುದನ್ನು ರೈಲ್ವೆ ಸಚಿವರು ಉಲ್ಲೇಖಿಸಿದ್ದರು ಆದರೆ 2007 ಮತ್ತು 2014 ರ ನಡುವಿನ ಏಳು ವರ್ಷಗಳಲ್ಲಿ - ಇದಕ್ಕಾಗಿ ಕೇವಲ 9000 ಕೋಟಿ ರೂ.ವ್ಯಯ ಮಾಡುವುದಾಗಿ ಹೇಳಿದ್ದರೂ  ಆದರೆ ಒಂದು ಕಿಮೀ ಟ್ರ್ಯಕ್ ಲಿಂಕ್ ಕೂಡ ಮಾಡಲಿಲ್ಲ  ಎಂದು ಅವರು ಟೀಕಿಸಿದರು. 

  ಆದಾಗ್ಯೂ, 2014 ರ ನಂತರ, ನಾವು ಅದೇ ಕೆಲಸ ಮಾಡಿದ್ದೇವೆ  ಮತ್ತು ಕೇವಲ ಐದು ವರ್ಷಗಳಲ್ಲಿ ನಾವು 39,000 ಕೋಟಿ ರೂ. ಹೂಡಿಕೆ ಮಾಡಿ  1900 ಕಿಮೀ ಟ್ರ್ಯಕ್ ಲಿಂಕ್ ಅನ್ನು ಸಹ ಸೇರಿಸಲಾಗಿದೆ.  2021 ರ ವೇಳೆಗೆ ಎರಡು ಸರಕು ಕಾರಿಡಾರ್ಗಳು ಸಿದ್ಧವಾಗಲಿವೆ.  ರೈಲ್ವೆ ಇಲಾಖೆಯಲ್ಲಿ  ಸುಧಾರಣೆ ತರಲು ಪಿಪಿಪಿ ಮಾದರಿಯ ಅಳವಡಿಕೆ ಬಗ್ಗೆ ಸರಕಾರದ  ನಿಲುವನ್ನು ಸಚಿವ ಗೋಯಲ್  ಅವರು ಸಮರ್ಥಿಸಿಕೊಂಡರು.