ಸೆನ್ಸೆಕ್ಸ್ 868.35 ಅಂಕ ಏರಿಕೆ

ಮುಂಬೈ, ಏಪ್ರಿಲ್ 9,ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‍ಇ)ದ ಸೂಚ್ಯಂಕ, ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ  868.35 ಅಂಕ ಏರಿಕೆ ಕಂಡು 30,762.31 ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ ನಿಫ್ಟಿ ಸಹ 272.75 ಅಂಕ ಏರಿಕೆ ಕಂಡು 9,021.50 ಕ್ಕೆ ತಲುಪಿದೆ.ಬುಧವಾರ 173 ಅಂಕ ಕುಸಿತ ಕಂಡಿದ್ದ ಸೆನ್ಸೆಕ್ಸ್, ಗುರುವಾರ ವಲಯದ ಸೂಚ್ಯಂಕಗಳ ಏರುಗತಿಯೊಂದಿಗೆ ಉತ್ತಮ ಆರಂಭ ಕಂಡಿತು .ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 30,847.10 ಮತ್ತು 30,459.76 ಮಟ್ಟದಲ್ಲಿತ್ತು.ನಿಫ್ಟಿ, ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 9,022.20 ಮತ್ತು 8,917.45 ಮಟ್ಟದಲ್ಲಿತ್ತು.ವಲಯ ಸೂಚ್ಯಂಕಗಳಾದ ಆರೋಗ್ಯ ರಕ್ಷಣೆ, ದೂರಸಂಪರ್ಕ, ಲೋಹ ಮತ್ತು ವಾಹನೋದ್ಯಮ ಶೇ ನಾಲ್ಕಕ್ಕಿಂತಲೂ ಏರಿಕೆ ಕಂಡಿವೆ. ಷೇರುಗಳ ಪೈಕಿ ಹಿಂದ್ ಯೂನಿಲಿವರ್ ಹೊರತುಪಡಿಸಿ ಉಳಿದೆಲ್ಲವೂ ಉತ್ತಮ ಏರಿಕೆ ಕಂಡಿವೆ. ಎಚ್‌ಡಿಎಫ್‌ಸಿ ಶೇ5.30ರಷ್ಟು ಏರಿಕೆ ಕಂಡು 1639.90 ರೂ.ನಲ್ಲಿತ್ತು, ಬಜಾಜ್ ಫೈನಾನ್ಸ್ ಶೇ 4.81 (2445.25 ರೂ.), ಆಕ್ಸಿಸ್ ಬ್ಯಾಂಕ್ ಶೇ 4.72 (409.75 ರೂ.)  ಭಾರತಿ ಏರ್‌ಟೆಲ್ ಶೇ 4.59 (482.80 ರೂ.) ಏರಿಕೆ ಕಂಡಿವೆ. ಅಮೆರಿಕದಲ್ಲಿ  ಡೌ ಜೋನ್ಸ್ ಶೇ 3.4, ನಾಸ್ಡಾಕ್ ಶೇ 2.58 ರಷ್ಟು ಏರಿಕೆ ಕಂಡಿವೆ.ಏಷ್ಯಾ ಮಾರುಕಟ್ಟೆಗಳಲ್ಲಿ ಗುರುವಾರ ಮಿಶ್ರ ವಹಿವಾಟು ನಡೆದಿದೆ. ಆರಂಭಿಕ ವಹಿವಾಟಿನಲ್ಲಿ ಜಪಾನ್‌ನ ನಿಕ್ಕಿ ಶೇ 0.5 ರಷ್ಟು ಕುಸಿದಿದ್ದರೆ, ಹಾಂಗ್ ಕಾಂಗ್ ಮಾರುಕಟ್ಟೆ ಶೇ 0.5ರಷ್ಟು ಏರಿಕೆಯಾಗಿದೆ. ಆಸ್ಟ್ರೇಲಿಯಾದ ಷೇರುಗಳು ಸಹ ಶೇ .1.5 ರಷ್ಟು ಲಾಭ ಗಳಿಸಿವೆ.