ಸೆನ್ಸೆಕ್ಸ್ 144 ಅಂಕ ಏರಿಕೆ

ಮುಂಬೈ, ಜ 28  ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 144 ಅಂಕ ಏರಿಕೆ ಕಂಡು 41,299.68 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 29 ಅಂಕ ಏರಿಕೆ ಕಂಡು 12,148.10 ರಲ್ಲಿತ್ತು.ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,333.25 ಮತ್ತು 41,101.51. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,163.55 ಮತ್ತು 12,095. 

ಸನ್ ಫಾರ್ಮಾ ಶೇ 2.21 ರಷ್ಟು ಏರಿಕೆ ಕಂಡು 458.25 ರೂ, ಎಚ್‌ಡಿಎಫ್‌ಸಿ ಶೇ 2.40 ರಷ್ಟು ಏರಿಕೆ ಕಂಡು 2447.10 ರೂ, ಬಜಾಜ್ ಫೈನಾನ್ಸ್ ಶೇ 1.43 ರಷ್ಟು ಏರಿಕೆ ಕಂಡು 4225 ರೂ, ಹೀರೋಮೊಟೊ ಕಾರ್ಪ್ ಶೇ 1.21 ರಷ್ಟು ಏರಿಕೆ ಕಂಡು 2484.25 ರೂ ನಷ್ಟಿತ್ತು.ಭಾರತಿ ಏರ್‌ಟೆಲ್ ಶೇ 2.17 ರಷ್ಟು ಇಳಿಕೆಯಾಗಿ 503.15 ರೂ, ಟಾಟಾ ಸ್ಟೀಲ್ ಶೇ 1.90 ರಷ್ಟು ಇಳಿಕೆಯಾಗಿ 453.60 ರೂ, ನೆಸ್ಲೆ ಇಂಡಿಯಾ ಶೇ 1.44 ರಷ್ಟು ಇಳಿಕೆಯಾಗಿ 15,444.90 ರೂ ನಷ್ಟಿದೆ.