ಸೆನ್ಸೆಕ್ಸ್ ಸೂಚ್ಯಂಕ ಕುಸಿತ: ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ

ನವದೆಹಲಿ,  ಮೇ,   18, ದೇಶದಾದ್ಯಂತ ಕೊರೊನಾ ಲಾಕ್ ಡೌನ್ ವಿಸ್ತರಣೆ ಆದ ಹಿನ್ನೆಲೆಯಲ್ಲಿ  ಸೋಮವಾರ ದೇಶದ   ಷೇರು ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಉಂಟಾಗಿದೆ. ಸೆನ್ಸೆಕ್ಸ್ ಸೂಚ್ಯಂಕ 1068.75 ಪಾಯಿಂಟ್ ಗಳ ಕುಸಿತ ಕಂಡು, 30,028.98 ಅಂಶಗಳೊಂದಿಗೆ ದಿನದ  ವಹಿವಾಟು ಮುಕ್ತಾಯಗೊಳಿಸಿದೆ.  ಇನ್ನು ನಿಫ್ಟಿ ಸೂಚ್ಯಂಕ  313.6 ಪಾಯಿಂಟ್ ಕುಸಿದು, 8823.25 ಅಂಕದೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ.ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯ ಬಿಟ್ಟರೆ  ಉಳಿದೆಲ್ಲ ಸೂಚ್ಯಂಕಗಳು ಕುಸಿದಿವೆ.  ಆಟೋ, ಲೋಹ ಮತ್ತು ಮೌಲಸೌಕರ್ಯ ವಲಯದ ಷೇರುಗಳು ಕೂಡ ಕುಸಿದಿವೆ. ಒಟ್ಟು 580 ಕಂಪೆನಿಯ ಷೇರುಗಳು ಏರಿಕೆ ಕಂಡರೆ, 1702 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿವೆ.