ಮುಂಬೈ, ಏಪ್ರಿಲ್ 7, ಏಷ್ಯಾ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟಿನ ನಡುವೆ, ರಿಯಾಲ್ಟಿ, ಬ್ಯಾಂಕೆಕ್ಸ್, ಐಟಿ ಮತ್ತು ಆರೋಗ್ಯ ರಕ್ಷಣೆ ಷೇರುಗಳಿಗೆ ಭಾರೀ ಖರೀದಿ ಬೆಂಬಲ ವ್ಯಕ್ತವಾದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಮಂಗಳವಾರ 1,308 ಅಂಕ ಏರಿಕೆ ಕಂಡು 28,898.36 ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ ಸಹ 363 ಅಂಕ ಏರಿಕೆ ಕಂಡು 8,446.30 ಕ್ಕೆ ಮುಟ್ಟಿದೆ. 'ಮಹಾವೀರ ಜಯಂತಿ' ಅಂಗವಾಗಿ ಸೋಮವಾರ ಮಾರುಕಟ್ಟೆ ಮುಚ್ಚಿದ್ದರಿಂದ ಮಂಗಳವಾರ ಚುರುಕಿನಿಂದ ಬೆಳಗಿನ ವಹಿವಾಟು ಆರಂಭವಾಯಿತು. ವಲಯ ಸೂಚ್ಯಂಕಗಳಾದ ತಂತ್ರಜ್ಞಾನ, ರಿಯಾಲ್ಟಿ, ಬ್ಯಾಂಕೆಕ್ಸ್ ಮತ್ತು ಐಟಿ ಷೇರುಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಯಿತು.ಷೇರುಗಳ ಪೈಕಿ ಇಂಡಸ್‌ಇಂಡ್ ಬ್ಯಾಂಕ್ ಶೇ 19.71 ರಷ್ಟು ಏರಿಕೆ ಕಂಡು 375 ರೂ.ಗೆ. ಎಂ ಅಂಡ್ ಎಂ ಶೇ 12.09 ರಷ್ಟು ಏರಿಕೆ ಕಂಡು 314.85 ರೂ.ನಲ್ಲಿ, ಆಕ್ಸಿಸ್ ಬ್ಯಾಂಕ್ ಶೇ 10 ರಷ್ಟು ಏರಿಕೆ ಕಂಡು 358.15 ರೂ.ನಲ್ಲಿ, ಐಸಿಐಸಿಐ ಬ್ಯಾಂಕ್ ಶೇ 7.49 ರಷ್ಟು ಕಂಡು 309.40 ರೂ.ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 7.53 ರಷ್ಟು ಏರಿಕೆ ಕಂಡಿವೆ. ಏಷ್ಯಾ ಮಾರುಕಟ್ಟೆಗಳ ಪೈಕಿ ಜಪಾನ್‌ನ ನಿಕ್ಕಿ ಶೇ 2.3 ರಷ್ಟು, ದಕ್ಷಿಣ ಕೊರಿಯಾದ ಕೋಸ್ಪಿ ಶೇ.1 ರಷ್ಟು ಏರಿಕೆ ಕಂಡಿವೆ. ಅಮೆರಿಕ ಮಾರುಕಟ್ಟೆಗಳ ಷೇರುಗಳು ಸೋಮವಾರ ಭಾರೀ ಏರಿಕೆ ಕಂಡಿದ್ದು, ಪ್ರತಿಯೊಂದು ಪ್ರಮುಖ ವಲಯಗಳ ಸೂಚ್ಯಂಕಗಳು ಶೇ 7 ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.