ಮುಂಬೈ, ಫೆ 3, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 235.77 ಅಂಕ ಏರಿಕೆ ಕಂಡು 39,701.02 ರಲ್ಲಿತ್ತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 85.70 ಅಂಕ ಏರಿಕೆ ಕಂಡು 11,747.55 ರಲ್ಲಿತ್ತು.
ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 40,006.09 ಮತ್ತು 39,563.07.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,749.85 ಮತ್ತು 11,614.50.
ನೆಸ್ಲೆ ಇಂಡಿಯಾ ಶೇ 5.16 ರಷ್ಟು ಏರಿಕೆ ಕಂಡು 16,222 ರೂ, ಹಿಂದ್ ಯೂನಿಲಿವರ್ ಶೇ 4.91 ರಷ್ಟು ಏರಿಕೆ ಕಂಡು 2175.45 ರೂ, ಏಷ್ಯನ್ ಪೇಂಟ್ಸ್ ಶೇ 4.21 ರಷ್ಟು ಹೆಚ್ಚಳವಾಗಿ 1830.40 ರೂ, ಇಂಡಸ್ಇಂಡ್ ಬ್ಯಾಂಕ್ ಶೇ 3.15 ರಷ್ಟು ಹೆಚ್ಚಳವಾಗಿ 1249.05 ರೂ, ಐಸಿಐಸಿಐ ಬ್ಯಾಂಕ್ ಶೇ 3.15 ರಷ್ಟು ಏರಿಕೆ ಕಂಡು 1249.05 ರೂ ನಷ್ಟಿತ್ತು. ಐಟಿಸಿ ಶೇ 3.86 ರಷ್ಟು ಇಳಿಕೆಯಾಗಿ 210.40 ರೂ, ಎಲ್ ಆಂಡ್ ಟಿ ಶೇ 0.95 ರಷ್ಟು ಇಳಿಕೆಯಾಗಿ 1275 ರೂ, ಇನ್ಫೋಸಿಸ್ ಶೇ 0.77 ರಷ್ಟು ಇಳಿಕೆಯಾಗಿ 774.10 ರೂ, ಎಚ್‌ಸಿಎಲ್ ಟೆಕ್ ಶೇ 0.68 ರಷ್ಟು ಇಳಿಕೆಯಾಗಿ 587.05 ರೂ ನಷ್ಟಿದೆ.