ಸೆನ್ಸೆಕ್ಸ್ 231.80 ಅಂಕ ಏರಿಕೆ

ಮುಂಬೈ, ಜ 29 :    ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನ ಅಂತ್ಯಕ್ಕೆ 231.80 ಅಂಕ ಏರಿಕೆ ಕಂಡು 41,198.66 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 73.70 ಅಂಕ ಏರಿಕೆ ಕಂಡು 12,129.50 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,334.86 ಮತ್ತು 41,108.19. 

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,169.60 ಮತ್ತು 12,103.80. 

ಬಜಾಜ್ ಫೈನಾನ್ಸ್ ಶೇ 4.95 ರಷ್ಟು ಏರಿಕೆಯಾಗಿ 4421.75 ರೂ, ನೆಸ್ಲೆ ಇಂಡಿಯಾ ಶೇ .2.95 ರಷ್ಟು ಏರಿಕೆ ಕಂಡು 15868 ರೂ, ಐಟಿಸಿ ಶೇ .2.64 ರಷ್ಟು ಏರಿಕೆ ಕಂಡು 236.85 ರೂ, ಇನ್ಫೋಸಿಸ್ ಶೇ 1.48 ರಷ್ಟು ಏರಿಕೆಯಾಗಿ 789.45 ರೂ, ಎಲ್ ಅಂಡ್ ಟಿ ಶೇ 1.37 ರಷ್ಟು ಏರಿಕೆಯಾಗಿ 1365.45 ರೂ ನಷ್ಟಿತ್ತು.

ಟಿಸಿಎಸ್ ಶೇ 1.44 ರಷ್ಟು ಇಳಿಕೆಯಾಗಿ 2152.70 ರೂ, ಎಚ್‌ಡಿಎಫ್‌ಸಿ ಶೇ 1.18 ರಷ್ಟು ಇಳಿಕೆಯಾಗಿ 2403.65 ರೂ, ಅಲ್ಟ್ರಾಸೆಮ್ಕೊ ಶೇ 0.84 ರಷ್ಟು ಇಳಿಕೆಯಾಗಿ 4570ರೂ, ಟೈಟಾನ್ ಶೇ 0.68 ರಷ್ಟು ಇಳಿಕೆಯಾಗಿ 1186.65 ರೂ ನಷ್ಟಿದೆ.