ಸೆನ್ಸೆಕ್ಸ್ 136.78 ಅಂಕ ಏರಿಕೆ

ಮುಂಬೈ, ಫೆ 3 :   ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 136.78 ಅಂಕ ಏರಿಕೆ ಕಂಡು 39,872.31 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 62.20 ಅಂಕ ಏರಿಕೆ ಕಂಡು 11,724.05 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 40,014.90 ಮತ್ತು 39,563.07.

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,749.85 ಮತ್ತು 11,614.50.

ನೆಸ್ಲೆ ಇಂಡಿಯಾ ಶೇ 5.30 ರಷ್ಟು ಏರಿಕೆ ಕಂಡು 16243.50 ರೂ, ಹಿಂದ್ ಯೂನಿಲಿವರ್ ಶೇ 5.06 ರಷ್ಟು ಏರಿಕೆ ಕಂಡು 2178.50 ರೂ, ಏಷ್ಯನ್ ಪೇಂಟ್ಸ್ ಶೇ 6.32 ರಷ್ಟು ಹೆಚ್ಚಳವಾಗಿ 1867.40 ರೂ, ಇಂಡಸ್ಇಂಡ್ ಬ್ಯಾಂಕ್ ಶೇ 4.29 ರಷ್ಟು ಹೆಚ್ಚಳವಾಗಿ 1262.90 ರೂ, ಬಜಾಜ್ ಆಟೋ ಶೇ 4.71 ರಷ್ಟು ಹೆಚ್ಚಳವಾಗಿ 3289.30 ರೂ ನಷ್ಟಿತ್ತು.

ಐಟಿಸಿ ಶೇ 5.09 ರಷ್ಟು ಇಳಿಕೆಯಾಗಿ 207.70 ರೂ, ಟಿಸಿಎಸ್ ಶೇ 2.86 ರಷ್ಟು ಇಳಿಕೆಯಾಗಿ 2103.15 ರೂ, ಎಚ್‌ಸಿಎಲ್ ಟೆಕ್ ಶೇ 2.04 ರಷ್ಟು ಇಳಿಕೆಯಾಗಿ 579 ರೂ, ಹೀರೋಮೊಟೊ ಕಾರ್ಪ್ ಶೇ 1.95 ರಷ್ಟು ಇಳಿಕೆಯಾಗಿ 2401.95 ರೂ ನಷ್ಟಿದೆ.