ಮುಂಬೈ, ಜ 2: ಮುಂಬೈ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ವಹಿವಾಟು ಆರಂಭದಲ್ಲಿ 128.18 ಅಂಕ ಕುಸಿತ ಕಂಡು 41,400.73 ತಲುಪಿದೆ.
ಮೆಟೀರಿಯಲ್ಸ್, ಎಫ್‌ಎಂಸಿಜಿ, ಹಣಕಾಸು, ಕೈಗಾರಿಕೆಗಳು, ಟೆಲಿಕಾಂ ಮತ್ತು ಆಟೋ ಷೇರುಗಳ ಮಾರಾಟ ಕಂಡುಬಂದಿದೆ.ರಾಷ್ಟ್ರೀಯ ಷೇರು ವಿನಿಮಯ ಸೂಚ್ಯಂಕ -ನಿಫ್ಟಿ (ಎನ್ಎಸ್ಇ) ಕೂಡ 38.85 ಅಂಕ ಕುಸಿದು 12,185.70 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಗರಿಷ್ಠ ಮತ್ತು ಕಡಿಮೆ ಕ್ರಮವಾಗಿ 41,532.59 ಮತ್ತು 41,301.63 ಅಂಕಗಳನ್ನು ದಾಖಲಿಸಿದೆ.ನಿಫ್ಟಿ ಗರಿಷ್ಠ ಮತ್ತು ಕಡಿಮೆ ಕ್ರಮವಾಗಿ 12,230.05 ಮತ್ತು 12,162.45 ಅಂಕಗಳನ್ನು ದಾಖಲಿಸಿದೆ.
ಮೆಟೀರಿಯಲ್ಸ್, ಎಫ್‌ಎಂಸಿಜಿ, ಹಣಕಾಸು, ಕೈಗಾರಿಕೆಗಳು, ಟೆಲಿಕಾಂ ಮತ್ತು ಆಟೋ ಷೇರುಗಳು ವಲಯ ಸೂಚ್ಯಂಕಗಳಾಗಿವೆ.