ಸೆನ್ಸೆಕ್ಸ್ 537 ಅಂಕ ಇಳಿಕೆ

ಮುಂಬೈ, ಏ 1 , ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ಆರಂಭಿಕ ವಹಿವಾಟಿನಲ್ಲಿ 537 ಅಂಕ ಕುಸಿದಿದೆ,  ಸೆನ್ಸೆಕ್ಸ್ 537 ಅಂಕ ಇಳಿಕೆ ಕಂಡು 28,931.05 ರಲ್ಲಿ ವಹಿವಾಟು ಆರಂಭಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 128 ಅಂಕ ಇಳಿಕೆ ಕಂಡು 8469.25 ರಲ್ಲಿ ವಹಿವಾಟು ಆರಂಭಿಸಿದೆ.     ಮಂಗಳವಾರದ ವಹಿವಾಟಿನಲ್ಲಿ ಚೇತರಿಕೆ ಕಂಡಿತ್ತಾದರೂ ಬ್ಯಾಂಕಿಂಗ್, ಹಣಕಾಸು, ಇಂಧನ ವಲಯದ ಷೇರುಗಳ ಮಾರಾಟ ಹೆಚ್ಚಾದ ಕಾರಣ ಈ ಕುಸಿತ ದಾಖಲಾಗಿದೆ.  ಕೋಟಕ್ ಬ್ಯಾಂಕ್ ಅತಿ ಹೆಚ್ಚು ಶೇ 7.05 ರಷ್ಟು ಇಳಿಕೆ ಕಂಡು 1204.95 ರೂ ನಷ್ಟಿತ್ತು. ಇನ್ಫೋಸಿಸ್ ಶೇ 3.49 ರಷ್ಟು ಇಳಿಕೆಯಾಗಿ 617.95 ರೂ, ಎಸ್ ಬಿ ಐ ಶೇ 3.12 ರಷ್ಟು ಇಳಿಕೆಯಾಗಿ 190.80 ರೂ, ಟೆಕ್ ಮಹೀಂದ್ರಾ ಶೇ 2.81 ರಷ್ಟು ಇಳಿಕೆ ಕಂಡು 549.05 ರೂ ಮತ್ತು ಓ ಎನ್ ಜಿ ಸಿ ಶೇ 2.78 ರಷ್ಟು ಇಳಿಕೆ ಕಂಡು 66.40 ರೂ ನಷ್ಟಿತ್ತು.  ಇಂಡಸ್ ಇಂಡ್ ಬ್ಯಾಂಕ್ ಶೇ 4.23 ರಷ್ಟು ಏರಿಕೆ ಕಂಡು 366 ರೂ, ಟಿಸಿಎಸ್ ಶೇ 0.60 ರಷ್ಟು ಏರಿಕೆಯಾಗಿ 1833.90 ರೂ, ಪವರ್ ಗ್ರಿಡ್ ಶೇ 0.31 ರಷ್ಟು ಏರಿಕೆಯಾಗಿ 159.50 ರೂ ನಷ್ಟಿತ್ತು.