ಸೆನ್ಸೆಕ್ಸ್ 458.07 ಅಂಕ ಇಳಿಕೆ

ಮುಂಬೈ, ಜ 27 :          ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 458.07 ಅಂಕ ಇಳಿಕೆ ಕಂಡು 41,155.12 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 129.25 ಅಂಕ ಇಳಿಕೆ ಕಂಡು 12,119.00 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,516.27 ಮತ್ತು 41,122.48.

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,216.60 ಮತ್ತು 12,107.00.

ಎಂ & ಎಂ ಶೇ 1.85 ರಷ್ಟು ಏರಿಕೆ ಕಂಡು 578.30 ರೂ, ಅಲ್ಟ್ರಾಸೆಮ್ಕೊ ಶೇ 1.05 ರಷ್ಟು ಹೆಚ್ಚಳವಾಗಿ 4690 ರೂ, ಟೆಕ್ ಮಹೀಂದ್ರಾ ಶೇ 0.50 ರಷ್ಟು ಏರಿಕೆ ಕಂಡು 791.30 ರೂ, ಐಸಿಐಸಿಐ ಬ್ಯಾಂಕ್ ಶೇ 0.45 ರಷ್ಟು ಏರಿಕೆ ಕಂಡು 536.35 ರೂ, ಆಕ್ಸಿಸ್ ಬ್ಯಾಂಕ್ ಶೇ 0.37 ರಷ್ಟು ಏರಿಕೆ ಕಂಡು 740 ರೂ ನಷ್ಟಿತ್ತು.

ಟಾಟಾ ಸ್ಟೀಲ್ ಶೇ 4.31 ರಷ್ಟು ಇಳಿಕೆಯಾಗಿ 462.40 ರೂ, ಇಂಡಸ್‌ಇಂಡ್ ಬ್ಯಾಂಕ್ ಶೇ 3.37 ರಷ್ಟು ಇಳಿಕೆಯಾಗಿ 1271.60 ರೂ, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.51 ರಷ್ಟು ಇಳಿಕೆಯಾಗಿ 1212.90 ರೂ, ಎಸ್‌ಬಿಐ ಶೇ .2.42 ರಷ್ಟು ಇಳಿಕೆಯಾಗಿ 316.20 ರೂ, ಪವರ್‌ಗ್ರಿಡ್ ಶೇ .2.26 ರಷ್ಟು ಇಳಿಕೆಯಾಗಿ 192.50 ರೂ ನಷ್ಟಿದೆ.