ಮುಂಬೈ, ಜ 27ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 154.75 ಅಂಕ ಇಳಿಕೆ ಕಂಡು 41,458.44 ರಲ್ಲಿತ್ತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 51.30 ಅಂಕ ಇಳಿಕೆ ಕಂಡು 12,196.95 ರಲ್ಲಿತ್ತು.
ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,516.27 ಮತ್ತು 41,323.29.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,216.60 ಮತ್ತು 12,154.60.
ಎಂ & ಎಂ ಶೇ 2.03 ರಷ್ಟು ಏರಿಕೆ ಕಂಡು 579.35 ರೂ, ಐಸಿಐಸಿಐ ಬ್ಯಾಂಕ್ ಶೇ 1.60 ಏರಿಕೆ ಕಂಡು 542.50 ರೂ, ಆಕ್ಸಿಸ್ ಬ್ಯಾಂಕ್ ಶೇ 1.04 ರಷ್ಟು ಏರಿಕೆ ಕಂಡು 745 ರೂ, ಟೆಕ್ ಮಹೀಂದ್ರಾ ಶೇ 0.59 ರಷ್ಟು ಹೆಚ್ಚಳವಾಗಿ 792 ರೂ ನಷ್ಟಿತ್ತು.
ಟಾಟಾ ಸ್ಟೀಲ್ ಶೇ 3.28 ರಷ್ಟು ಇಳಿಕೆಯಾಗಿ 467.40 ರೂ, ಕೊಟಕ್ ಬ್ಯಾಂಕ್ ಶೇ 1.43 ರಷ್ಟು ಇಳಿಕೆಯಾಗಿ 1620.50 ರೂ, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 1.38 ರಷ್ಟು ಇಳಿಕೆಯಾಗಿ 1227 ರೂ, ಎಸ್‌ಬಿಐ ಶೇ 1.25 ರಷ್ಟು ಇಳಿಕೆಯಾಗಿ 320 ರೂ ನಷ್ಟಿದೆ.