ಮುಂಬೈ, ಜ 21, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 128.18 ಅಂಕ ಇಳಿಕೆ ಕಂಡು 41,400.73 ರಲ್ಲಿತ್ತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 38.85 ಅಂಕ ಇಳಿಕೆ ಕಂಡು 12,185.70 ರಲ್ಲಿತ್ತು.ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,532.59 ಮತ್ತು 41,301.63. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,230.05 ಮತ್ತು 12,162.45. ಒಎನ್‌ಜಿಸಿ ಶೇ 1.55 ರಷ್ಟು ಏರಿಕೆ ಕಂಡು 124.25 ರೂ, ರಿಲಯನ್ಸ್ ಇಂಡಸ್ಟ್ರೀಸ್ ಶೇ 0.36 ರಷ್ಟು ಏರಿಕೆ ಕಂಡು 1537.55 ರೂ, ಐಸಿಐಸಿಐ ಬ್ಯಾಂಕ್ ಶೇ 0.27 ರಷ್ಟು ಏರಿಕೆ ಕಂಡು 536.30 ರೂ, ಎನ್‌ಟಿಪಿಸಿ ಶೇ 0.25 ರಷ್ಟು ಏರಿಕೆ ಕಂಡು 118.50 ರೂ.ನಷ್ಟಿತ್ತು.ಎಂ ಅಂಡ್ ಎಂ ಶೇ 2.15 ರಷ್ಟು ಇಳಿಕೆ ಕಂಡು 554.90 ರೂ, ಟಾಟಾ ಸ್ಟೀಲ್ ಶೇ 2.11 ರಷ್ಟು ಇಳಿಕೆ ಕಂಡು 480.30 ರೂ, ಟೈಟಾನ್ ಶೇ 1.75 ರಷ್ಟು ಇಳಿಕೆ ಕಂಡು 1166.90 ರೂ, ಏಷ್ಯನ್ ಪೇಂಟ್ಸ್ ಶೇ 1.71 ರಷ್ಟು ಇಳಿಕೆ ಕಂಡು 1817 ರೂ ನಷ್ಟಿದೆ.