ಸೆನ್ಸೆಕ್ಸ್ 107.86 ಅಂಕ ಇಳಿಕೆ

ಮುಂಬೈ, ಜ 22,  ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ಆರಂಭಿಕ ವಹಿವಾಟಿನಲ್ಲಿ 107.86 ಅಂಕ ಇಳಿಕೆ ಕಂಡು 41,215.95 ರಲ್ಲಿತ್ತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 36.45 ಅಂಕ ಇಳಿಕೆ ಕಂಡು 12,133.40 ರಲ್ಲಿತ್ತು.ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,532.29 ಮತ್ತು 41,197.71. 

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,225.05 ಮತ್ತು 12,125.50. ನೆಸ್ಲೆ ಇಂಡಿಯಾ ಶೇ 1.63 ರಷ್ಟು ಏರಿಕೆ ಕಂಡು 15,529.10 ರೂ, ಇನ್ಫೋಸಿಸ್ ಶೇ 1.61 ರಷ್ಟು ಏರಿಕೆಯಾಗಿ 774.20 ರೂ, ಎಚ್‌ಸಿಎಲ್ ಟೆಕ್ ಶೇ 1.38 ರಷ್ಟು ಏರಿಕೆಯಾಗಿ 592.35 ರೂ, ಟಿಸಿಎಸ್ ಶೇ 1.28 ರಷ್ಟು ಏರಿಕೆಯಾಗಿ 2199.25 ರೂ ನಷ್ಟಿತ್ತು.ಒಎನ್‌ಜಿಸಿ ಶೇ 3.79 ರಷ್ಟು ಇಳಿಕೆಯಾಗಿ 1181.0 ರೂ, ಎನ್‌ಟಿಪಿಸಿ ಶೇ 3.03 ರಷ್ಟು ಇಳಿಕೆಯಾಗಿ 117.65 ರೂ, ಮಾರುತಿ ಸುಜುಕಿ ಶೇ .2.14 ರಷ್ಟು ಇಳಿಕೆ ಕಂಡು 7146.90 ರೂ, ಪವರ್‌ಗ್ರಿಡ್‌ಗೆ 2.14 ರಷ್ಟು ಇಳಿಕೆಯಾಗಿ 196.20 ರೂ. ನಷ್ಟಿದೆ.