ಮುಂಬೈ, 11 ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್
ಬುಧವಾರದ ಬೆಳಗಿನ ವಹಿವಾಟಿನಲ್ಲಿ 72 ಪೈಸೆ ಚೇತರಿಕೆ ಕಂಡಿದೆ.
ಸೆನ್ಸೆಕ್ಸ್ 72 ಅಂಕ ಏರಿಕೆ ಕಂಡು 40,312.19 ರಲ್ಲಿತ್ತು.
ನಿಫ್ಟಿ ಸಹ 20.40 ಅಂಕ ಏರಿಕೆ ಕಂಡು 11,877.20 ಯಲ್ಲಿತ್ತು.
ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 40,423.14 ಮತ್ತು 40,135.37
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ
11,907.30 ಮತ್ತು 11,864.65.
ಎನ್ ಟಿ ಪಿ ಸಿ ಶೇ 1.59 ರಷ್ಟು ಏರಿಕೆ ಕಂಡು 111.70 ರೂ, ಟೆಕ್ ಮಹೀಂದ್ರ ಶೇ 1.48 ರಷ್ಟು 756.30 ರೂ, ಬಜಾಜ್ ಫೈನ್ಯಾನ್ಸ್ ಶೇ 1.27 ರಷ್ಟು ಏರಿಕೆಯಾಗಿ 4038 ರೂ ಮತ್ತು ಐಟಿಸಿ ಶೇ 1.10 ರಷ್ಟು ಏರಿಕೆ ಕಂಡು 238 ರೂ ನಷ್ಟಿತ್ತು.
ಯೆಸ್ ಬ್ಯಾಂಕ್ ಶೇ 13.55 ರಷ್ಟು ಇಳಿಕೆ ಕಂಡು 43.70 ರೂ, ಹೀರೋ ಮೋಟೋ ಕಾರ್ಪ್ ಶೇ 1.97 ರಷ್ಟು ಇಳಿಕೆಯಾಗಿ 2284.55 ರೂ, ಎಲ್ & ಟಿ ಶೇ 1.23 ರಷ್ಟು ಇಳಿಕೆಯಾಗಿ 1263.40 ರೂ ಮತ್ತು ಪವರ್ ಗ್ರಿಡ್ ಶೇ 1.15 ರಷ್ಟು ಇಳಿಕೆ ಕಂಡು 180.65 ರೂ ನಷ್ಟಿತ್ತು.