ಸೆನ್ಸೆಕ್ಸ್ 600 ಅಂಕ ಜಿಗಿತ

ಮುಂಬೈ, ಏಪ್ರಿಲ್ 27,ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಆರಂಭಿಕ ವಹಿವಾಟಿನಲ್ಲಿ 600 ಅಂಕ ಏರಿಕೆ ಕಂಡು 31.927.98ರಲ್ಲಿತ್ತು.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‍ಎಸ್‍ಇ) ಸೂಚ್ಯಂಕ ನಿಫ್ಟಿ ಸಹ  177 ಅಂಕ ಏರಿಕೆ ಕಂಡು 9,331.95ರ ಮಟ್ಟದಲ್ಲಿತ್ತು.ಶುಕ್ರವಾರದ ವಹಿವಾಟಿನಲ್ಲಿ 535 ಅಂಕ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ, ಸೋಮವಾರ ಬೆಳಗಿನ ವಹಿವಾಟಿನಲ್ಲಿ ರಿಯಾಲ್ಟಿ, ಬ್ಯಾಂಕಿಂಗ್‍, ಹಣಕಾಸು ಮತ್ತು ಆರೋಗ್ಯದಂತಹ ವಲಯ ಸೂಚ್ಯಂಕಗಳ ಏರಿಕೆಯಿಂದ ಉತ್ತಮ ಆರಂಭ ಪಡೆಯಿತು.  ಸೆನ್ಸೆಕ್ಸ್ ಈ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 31,927.98 ಮತ್ತು 31,651.58ರ ಮಟ್ಟದಲ್ಲಿತ್ತು.  ನಿಫ್ಟಿ, ಗರಿಷ್ಠ ಮತ್ತು ಕನಿಷ್ಠ  ಕ್ರಮವಾಗಿ 9,331.95 ಮತ್ತು 9,250.35ರ ನಡುವೆ ವಹಿವಾಟು ನಡೆಸಿತು. ಆಕ್ಸಿಸ್ ಬ್ಯಾಂಕ್ ಶೇ 3.32ರಷ್ಟು ಏರಿಕೆ ಕಂಡು 417.50 ರೂ ನಲ್ಲಿ, ಸನ್ ಫಾರ್ಮಾ ಶೇ 3.29ರಷ್ಟು ಏರಿಕೆ ಕಂಡು 501.20 ರೂ.ನಲ್ಲಿ, ಇಂಡಸ್ಇಂಡ್ ಬ್ಯಾಂಕ್ ಶೇ 3.11ರಷ್ಟು ಏರಿಕೆ ಕಂಡು 395 ರೂ.ನಲ್ಲಿ, ಬಜಾಜ್ ಫೈನಾನ್ಸ್ ಶೇ 2.88ರಷ್ಟು ಏರಿಕೆ ಕಂಡು 2516.20 ರೂ.ನಲ್ಲಿ ಮತ್ತು ಮಾರುತಿ ಸುಜುಕಿ ಶೇ 2.82ರಷ್ಟು ಏರಿಕೆ ಕಂಡು  5188 ರೂ.ನಲ್ಲಿತ್ತು.