ಸೆನ್ಸೆಕ್ಸ್ 551 ಅಂಕ ಜಿಗಿತ

ಮುಂಬೈ, ಮಾರ್ಚ್ 31, ಕಳೆದೆರುಡು ದಿನದಿಂದ ಇಳಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 551 ಅಂಕ ಜಿಗಿದಿದೆ.ಜಾಗತಿಕ ಮಾರುಕಟ್ಟೆಯ ಚೇತರಿಕೆಯ ಕಾರಣ ಸೆನ್ಸೆಕ್ಸ್ ಮಂಗಳವಾರ 551 ಅಂಕ ಏರಿಕೆ ಕಂಡು 28991 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 146.80 ಅಂಕ ಏರಿಕೆ ಕಂಡು 8427.90 ರಲ್ಲಿ ವಹಿವಾಟು ಆರಂಭಿಸಿದೆ.ಎಚ್ ಡಿ ಎಫ್ ಸಿ ಶೇ 3.80 ರಷ್ಟು ಏರಿಕೆ ಕಂಡು 1662 ರೂ, ಆಕ್ಸಿಸ್ ಬ್ಯಾಂಕ್ ಶೇ 2.98 ರಷ್ಟು ಏರಿಕೆಯಾಗಿ 379.70 ರೂ, ಟಾಟಾ ಸ್ಟೀಲ್ ಶೇ 2.89 ರಷ್ಟು ಏರಿಕೆಯಾಗಿ 261.50 ರೂ, ಪವರ್ ಗ್ರಿಡ್ ಶೇ 2.89 ರಷ್ಟು ಏರಿಕೆ ಕಂಡು 160.20 ರೂ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಶೇ 2.78 ರಷ್ಟು ಏರಿಕೆಯಾಗಿ 1061.10 ರೂ ನಷ್ಟಿತ್ತು. ಇಂಡಸ್ ಇಂಡ್ ಬ್ಯಾಂಕ್ ಶೇ 10 ರಷ್ಟು ಇಳಿಕೆ ಕಂಡು 370.40 ರೂ, ವಾಲ್ ಸ್ಟ್ರೀಟ್ ಶೇ 3.19 ರಷ್ಟು ಇಳಿಕೆ ಕಂಡಿದೆ.