ಮುಂಬೈ, ಫೆ 28 : ಕೋರೊನವೈರಸ್ ಭೀತಿಯ ನಡುವೆ ಜಾಗತಿಕ ಷೇರುಗಳ ಕುಸಿತದ ನಂತರ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 1,101 ಅಂಕ ಪತನಗೊಂಡು 38,600 ಕ್ಕೆ ಇಳಿದಿದೆ.
ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ 348 ಅಂಕ ಕುಸಿದು, 11,285 ಕ್ಕೆ ಇಳಿದಿದೆ.
ವಾರದ ಕೊನೆಯ ದಿನದ ಆರಂಭಿಕ ವಹಿವಾಟು 39087.47 ಅಂಕದೊಂದಿಗೆ ಆರಂಭವಾಯಿತು. ಕೆಲವೇ ಹೊತ್ತಿನಲ್ಲಿ ಮಾರಾಟದ ಒತ್ತಡದಿಂದ 38600.81 ಕ್ಕೆ ಕುಸಿಯಿತು.
ಒಟ್ಟಾರೆ ಮಾರಾಟ ಒತ್ತಡದಿಂದ ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ 300 ಅಂಕ ಕುಸಿಯಿತು. ಸದ್ಯ, 290 ಅಂಕ ಕುಸಿತದೊಂದಿಗೆ 11,343ರಲ್ಲಿ ವಹಿವಾಟು ನಡೆಯುತ್ತಿದೆ.
ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ಒಎನ್‌ಜಿಸಿ ಷೇರುಗಳು ಭಾರೀ ನಷ್ಟ ಕಂಡವು.