ಲೋಕದರ್ಶನ ವರದಿ
ಕೊಪ್ಪಳ 26: ಪಕ್ಕದ ಗೋವಾ ರಾಜ್ಯದ ಬಿಚ್ಚೊಲಿಯಂ ನಗರದ ಹೀರಾಬಾಯಿ ಸಭಾಂಗಣದಲ್ಲಿ ಕರ್ಮಭುಮಿ ಕನ್ನಡ ಸಂಘ ಬಿಚ್ಚೊಲಿ, ಗೋವಾ ಮತ್ತು ಕರ್ನಾಟಕ್ ಜಾಗೃತಿ ವೇದಿಕೆ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹಾ ಬರುವ ಇದೇ ಜೂನ್ 16ರ ರವಿವಾರ 11ನೇ ಬಾರಿಗೆ ಹೊರನಾಡ ಕನ್ನಡ ಸಾಂಸ್ಕೃತಿಕ ಸಮಾವೇಶ ಮತ್ತು ಸಮ್ಮೇಳನ ಜರುಗಲಿದ್ದು, ಸಮ್ಮೇಳದ ಸರ್ವಾಧ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ತಾವರಗೇರೆಯ ವಿ.ಆರ್.ತಾಳಿಕೋಟಿ ಆಯ್ಕೆಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ್ ಜಾಗೃತಿ ವೇಧಿಕೆ ಪದಾಧಿಕಾರಿಗಳ ಸಭೆಯಲ್ಲಿ ಈ ವಿಷಯ ಕುರಿತು ಚಚರ್ಿಸಲಾಗಿ, ಸದರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿ.ಆರ್.ತಾಳಿಕೋಟಿಯವರ ಹೆಸರು ಸಭೆಯಲ್ಲಿ ಪ್ರಸ್ತಾಪಿಸಿ ಅದಕ್ಕೆ ಎಲ್ಲರು ಸವರ್ಾನುಮತದ ಒಪ್ಪಿಗೆ ನೀಡಿ ಅನುಮೋದಿಸಲಾಯಿತು. ಸದರಿಯವರ ಸವರ್ಾಧ್ಯಕ್ಷತೆಯಲ್ಲಿ ಬಿಚ್ಚೊಲಿ ನಗರದಲ್ಲಿ ಸಂಸ್ಕೃತಿಕ ಸಮ್ಮೇಳನ ಜರುಗಲಿದೆ ಶೀಘ್ರ ಅವರ ನಿವಾಸಕ್ಕೆ ತೆರಳಿ, ಅವರಿಗೆ ವೇದಿಕೆ ಪರವಾಗಿ ಸನ್ಮಾನಿಸಿ, ಅದಿಕೃತ ಆಹ್ವಾನ ನೀಡಲಾಗುವುದು ಕಾರ್ಯಕ್ರಮ ಸಂಘಟಕ ಮಹೇಶ ಬಾಬು ಸುವರ್ೆ ಮತ್ತು ಕನರ್ಾಟಕ ಜಾಗೃತಿ ವೇದಿಕೆಯ ಮುಖ್ಯಸ್ಥ ಶಿವಬಾಲ ಸ್ವಾಮಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಹಾಗೂ ಐಎಫ್ಡಬ್ಲ್ಯುಜೆ ರಾಷ್ಠ್ರೀಯ ಸದಸ್ಯ ವಿ.ಆರ್.ತಾಳಿಕೋಟಿಯವರು ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳಕ್ಕೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವುದಕ್ಕೆ ಕೊಪ್ಪಳ ಜಿಲ್ಲೆಯ ಪತ್ರಿಕ ಬಳಗ ಸೇರಿದಂತೆ ಕುಷ್ಟಗಿ ಮತ್ತು ತಾವರಗೇರೆಯ ಪತ್ರಕರ್ತರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.