ಯಲ್ಲಾಪುರ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಹಾಗೂ ವಿತರಕರ ಸನ್ಮಾನ ಕಾರ್ಯಕ್ರಮ



ಯಲ್ಲಾಪುರ: ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನಶೀಲತೆ ಕೊರೆತೆ ಪರಿಶ್ರಮದ ಅಗತ್ಯತೆ ಇಲ್ಲದಂತಾಗಿದೆ. ಅದರಲ್ಲೂ ದೃಶ್ಯ ಮಾಧ್ಯಮದ ಸಹವಾಸವೇ ಬೇಡ ಹೇಳುವಷ್ಟು ಬೆಳದುನಿಂತಿದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಪರಿಶ್ರಮದ ಅಗತ್ಯವಿದೆ. ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

   ಪಟ್ಟಣದ ಎ.ಪಿ.ಎಂ.ಸಿ ಆವರಣದ ಅಡಿಕೆ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಸಂಜೆ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ, ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿಂದು ಮಾಧ್ಯಮ ಕ್ಷೇತ್ರ ತನ್ನ ಪ್ರಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಮಾಧ್ಯಮ ಕ್ಷೇತ್ರ ರಾಜಕೀಯ ಪಕ್ಷದ ಕೈಗೊಂಬೆಯಾಗುತ್ತಿದ್ದು, ವಾಸ್ತವಿಕತೆಯಿಂದ ದೂರವಾಗುತ್ತಿದೆ. ಇದು ಸಮಾಜಕ್ಕೆ ಒಳಿತನ್ನುಂಟು ಮಾಡದು  ಆದರೆ ಒಂದು ಪೆನ್ನು, ಪಟ್ಟಿ ಇದ್ದ ವರದಿಗಾರ ತನ್ನ ಕರ್ತವ್ಯ, ಹೊಣೆಗಾರಿಕೆ ಮತ್ತು ಬದ್ಧತೆ ಉಳಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ ಎಂದರು.

       ವರದಿಗಾರರಾಗಿ ಕಾರ್ಯ ನಿರ್ವಹಿಸಿದ  ಅನಂತ ವೈದ್ಯ, ಗಣಪತಿ ಮಾನಿಗದ್ದೆ, ಬೀರಣ್ಣ ನಾಯಕ ಮೊಗಟಾ ಮತ್ತು ಪತ್ರಿಕಾ ವಿತರಕ ವಿನಾಯಕ ವೆಣರ್ೇಕರ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

   ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜಗತ್ತಿನಲ್ಲಿ ಎಲ್ಲ ವಸ್ತುಗಳಿಗೂ ಪಾಲು ಕೇಳುವವರಿದ್ದಾರೆ. ಆದರೆ ಜ್ಞಾನ ಮತ್ತು ಬರಹದಲ್ಲಿ ಮಾತ್ರ ಪಾಲು ಕೇಳುವುದಕ್ಕಾಗದು. ಜಗತ್ತಿನ ಸದ್ಗುಣ ಜ್ಞಾನ ಮತ್ತು ಬರಹವೇ ಆಗಿದೆ. ಬರಹ ಮಾತ್ರ ದಾಖಲಿಸುತ್ತದೆ. ಆದರೆ ದೃಶ್ಯ ಮಾಧ್ಯಮ ತಾತ್ಕಾಲಿಕ ಪರಿಣಾಮ ಉಂಟುಮಾಡುತ್ತದೆ. ಶಾಶ್ವತ ನಿಲ್ಲುವುದಿಲ್ಲ ಎಂದರು.

   ಸನ್ಮಾನಿತರಾದ ಅನಂತ ವೈದ್ಯ ಮಾತನಾಡಿ, ಬದುಕಿನಲ್ಲಿ ಪದವಿಗಿಂತಲೂ ಅನುಭವವೇ ಯಶಸ್ಸನ್ನು ನೀಡುತ್ತದೆ ಎಂದರು.

ಸನ್ಮಾನಿತ ಹಿರಿಯ ಬರಹಗಾರ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿದ್ದ ನಾವು ಫೇಸ್ಬುಕ್ನಂತಹ ತೀರಾ ಅಪಾಯಕಾರಿ ಮಾಧ್ಯಮಗಳಲ್ಲಿ ತೊಡಗಿಕೊಳ್ಳುವ ದುಸ್ಥಿತಿಗೆ ತಲುಪಿರುವುದು ವಿಷಾದನೀಯ ಎಂದರು.

   ಇನ್ನೊಬ್ಬ ಸನ್ಮಾನಿತ ಗಣಪತಿ ಮಾನಿಗದ್ದೆ ಮಾತನಾಡಿ ಬರಹದಲ್ಲಿ ಸಾಹಿತ್ಯ, ಅಧ್ಯಯನಶೀಲತೆ ಇದ್ದಾಗ ಮಾತ್ರ ಬರಹಕ್ಕೆ ಶ್ರೇಷ್ಠತೆ ದೊರೆಯುತ್ತದೆ ಎಂದರು. 

  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ನಮ್ಮ ತಪ್ಪಿನ ಅರಿವು ಆಗುವುದಿಲ್ಲ. ಸಣ್ಣ ತಪ್ಪೇ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. 

    ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ, ತಹಶೀಲ್ದಾರ್ ಡಿ.ಜಿ.ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ನಾಯಕ, ಸುಪಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಿರೀಶ ಭಾಗ್ವತ್, ಜಲ ಸೇವಕ ಸುಬ್ರಾಯ ನಾಯ್ಕ ಮಂಚೀಕೇರಿ, ಶಮಾ ಗ್ಯಾಸ್ ಏಜನ್ಸಿಸ್ ಮಾಲಕ ಎ.ಎ.ಶೇಖ್ ಮತ್ತಿತರರು ಉಪಸ್ಥಿತರಿದ್ದರು.

  ಪತ್ರಕರ್ತ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತ ಶಂಕರ್ ಭಟ್ಟ ತಾರೀಮಕ್ಕಿ, ಪತ್ರರ ಸಂಘದ ಖಜಾಂಚಿ ಪ್ರಭಾವತಿ ಜಯರಾಜ ಸನ್ಮಾನ ಪತ್ರ ವಾಚಿಸಿದರು, ನಿಕಟಪೂರ್ವ ಅಧ್ಯಕ್ಷ ನಾಗರಾಜ ಮದ್ಗುಣಿ ಸ್ವಾಗತಿಸಿದರು. ಪತ್ರಕರ್ತ ಸಂಘದ ಸಹ ಕಾರ್ಯದಶರ್ಿ ದತ್ತಾತ್ರೇಯ ಕಣ್ಣೀಪಾಲ ನಿರೂಪಿಸಿದರು.