ಬೆಂಗಳೂರು, ನ ೦2: ರಫ್ ಅಂಡ್ ಟಪ್ ಆಕ್ಷನ್ ಚಿತ್ರಗಳಿಗೆ ಹೆಸರಾಗಿದ್ದ ಹಿರಿಯ ನಿರ್ದೇಶಕ ಹ ಸೂ ರಾಜಶೇಖರ್
ಶನಿವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು ೬೦ ವರ್ಷ ವಯಸ್ಸಾಗಿತ್ತು.
ಮುತ್ತಿನ ಹಾರ, ಬಣ್ಣದ
ಗೆಜ್ಜೆ, ಯುಗಪುರುಷ, ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ರಾಜಶೇಖರ್, ಕರ್ಫ್ಯೂ, ಗರುಡ, ಪಾಪಿಗಳ ಲೋಕದಲ್ಲಿ,
ಬಣ್ಣದ ಹೆಜ್ಜೆ, ರಫ್ ಅಂಡ್ ಟಫ್, ಇನ್ಸ್ ಪೆಕ್ಟರ್ ಜಯಸಿಂಹ ಹಾಗೂ ಇನ್ನಿತರ ಚಿತ್ರಗಳನ್ನು ಸ್ವತಃ
ನಿರ್ದೇಶಿಸಿದ್ದರು.
ಕನ್ನಡವಲ್ಲದೆ ತುಳು
ಸಿನೆಮಾಗಳಿಗೆ ಕೂಡ ಆಕ್ಷನ್ ಕಟ್ ಹೇಳಿದ್ದರು. ಚಾಮರಾಜನಗರ
ತಾಲೂಕಿನ ಹರಪನಹಳ್ಳಿ ಅವರ ಹುಟ್ಟೂರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ
ವಾಸವಾಗಿದ್ದರು.