ಲೋಕದರ್ಶನ ವರದಿ
ಬೆಳಗಾವಿ 09: ಇತ್ತಿಚಿಗೆ ಹಿರಿಯ ನಾಗರಿಕರ ಸಂಘದ ವತಿಯಿಂದ ಬೆಳಗಾವಿಯ ಪೋಲಿಸ ಹೆಡ್ಕ್ವಾಟರ್ಸ ಸಮುದಾಯ ಭವನದಲ್ಲಿ ಹಿರಿಯ ನಾಗರಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ವಾಯ್. ಭೆಂಡಿಗೇರಿ ಅವರು ಮಾತನಾಡಿ, ಹಿರಿಯ ನಾಗರಕರು ಅನೇಕ ರೀತಿಯಲ್ಲಿ ಶೋಷಿತರಾಗುತ್ತಿದ್ದು, ಅವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಂಘವು ಕಾರ್ಯ ನಿರ್ವಹಿಸುತ್ತಿದೆ. ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ಸಂಘದ ಮೊದಲ ಕೆಲಸವಾಗಿದೆ.ಹಿರಿಯರಿಗೆ ಆಗುವ ತೊಂದರೆಗಳನ್ನು ನಿವಾರಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಘಟಕದ ಪ್ರಧಾನ ಕಾರ್ಯದಶರ್ಿ ಎಂ.ಎಸ್.ಮುದಕವಿ ಅವರು ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳು, ಮತ್ತು ಧೈಯೋದ್ದೇಶಗಳ ಕುರಿತು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಿಬೇಕೆಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ನಿವೃತ್ತ ಪೋಲಿಸ ಅಧಿಕಾರಿಗಳಾದ ಆರ್.ಬಿ,ಪಾಟೀಲ, ಅಶೋಕ ಕುರೇರ, ಎಸ್.ಎಸ್.ಮುರುಗೋಡ, ಬೆಳಗಾವಿ ಹಿರಿಯ ನಾಗರಿಕರ ಸಂಘದ ಪದಾಧಿಕಾರಿಗಳಾದ ಬಸವರಾಜ ಗೊಮಾಡಿ, ಪ್ರಸಾದ ಹಿರೇಮಠ, ಮಹಾದೇವ ಬಾಪಟ ಸೇರಿದಂತೆ ನಿವೃತ್ತ ಪೋಲಿಸ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.