ಹಿರಿಯ ಸಿಪಿಐ (ಎಂ) ನಾಯಕ ಕುಂಜನಾಂತನ್ ನಿಧನ

ತಿರುವನಂತಪುರಂ, ಜೂನ್ 12, ಹಿರಿಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ನಾಯಕ ಪಿ.ಕೆ.ಕುಂಜನಾಂತನ್   ದೀರ್ಘ ಕಾಲದ ಅನಾರೋಗ್ಯದ ನಿಮಿತ್ತ  ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಅವರಿಗೆ  73 ವರ್ಷ ವಯಸ್ಸಾಗಿತ್ತು ಅವರು  ಪತ್ನಿ ಸಂತಾ ಮತ್ತು ಇಬ್ಬರು ಮಕ್ಕಳನ್ನು  ಅಗಲಿದ್ದಾರೆ.  ಎಡ ಪಕ್ಷದ ಮುಖಂಡ ಟಿ.ಪಿ.ಚಂದ್ರಶೇಖರನ್ ಅವರ ಹತ್ಯೆ ಪ್ರಕರಣದಲ್ಲಿ ಅವರು ಶಿಕ್ಷೆಗೊಳಗಾಗಿದ್ದರು. ಕುಂಜನಾಂತನ್ ಕೊಲೆ ಪ್ರಕರಣದಲ್ಲಿ 13 ನೇ ಆರೋಪಿಯಾಗಿದ್ದು  2019 ರ ಜನವರಿ 14 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಹೊಟ್ಟೆ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು  ಆಸ್ಪತ್ರೆಯ ಮೂಲಗಳು ಹೇಳಿವೆ.