ವಿಜಯಪುರ 24: ಕೋವಿಡ್-19 ತೀವ್ರಗತಿಯಲ್ಲಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ, ಜಿಲ್ಲೆಯಾದ್ಯಂತ ತೀವ್ರ ಶ್ವಾಸಕೋಶ ತೊಂದರೆ ಹಾಗೂ ನೆಗಡಿ, ಕೆಮ್ಮು, ಜ್ವರ ಸಂಬಂಧಿಸಿದ ಯಾವುದೇ ರೋಗಿಗಳನ್ನು ಯೂನಾನಿ, ಆಯರ್ುವೇದ, ಹೋಮಿಯೊಪತಿಕ್ ವೈದ್ಯರು ಚಿಕಿತ್ಸೆ ಮಾಡದೆ ನೂರಿತ ತಜ್ಞ ವೈದ್ಯರ ಬಳಿಗೆ ಅಂತಹ ರೋಗಿಗಳನ್ನು ಕಳುಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ರೋಗಿಗಳ ಅತ್ಯುತ್ತಮ ಚಿಕಿತ್ಸಾ ಮತ್ತು ಇನ್ನಿತರ ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮತ್ತು ಖಾಸಗಿ ಆಸ್ಪತ್ರ ವೈದ್ಯರೊಂದಿಗೆ ಸಭೆ ನಡೆಸಿದ ಅವರು ಕೋವಿಡ್-19 ಸೂಕ್ಷ್ಮವಾಗಿ ತಜ್ಞವೈದ್ಯರಿಂದ ಉಪಚರಿಸುವುದು ಅತ್ಯವಶ್ಯಕವಾಗಿದ್ದು, ತೀವ್ರ ಶ್ವಾಸಕೋಶ ನೆಗಡಿ, ಕೆಮ್ಮು, ಜ್ವರ ಸಂಬಂಧಿತ ರೋಗಿಗಳು ತಮ್ಮ ಬಳಿಗೆ ಬಂದಲ್ಲಿ ತಕ್ಷಣ ತಜ್ಞ ವೈದ್ಯರ ಬಳಿ ಕಳುಹಿಸಿ ಕೊಡುವಂತೆ ಆದೇಶ ನೀಡಲಾಗಿದ್ದು, ಯೂನಾನಿ, ಹೋಮಿಯೊಪತಿಕ್, ಆಯರ್ುವೇದ ವೈದ್ಯರು ಯಾವುದೇ ಸಂದರ್ಭದಲ್ಲಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ವಿಳಂಬಮಾಡದೆ ತಜ್ಞವೈದ್ಯರ ಬಳಿಗೆ ಕಳುಹಿಸಿಕೊಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೋವಿಡ್-19 ರೋಗಿಗಳಿಗೆ ಉಪಚರಿಸಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಆಯಾ ಖಾಸಗಿ ಆಸ್ಪತ್ರೆಗಳು, ಸಕರ್ಾರಿ ಆಸ್ಪತ್ರೆಗಳು, ಹಾಗೂ ಫೀವರ್ ಕ್ಲೀನಿಕ್ಗಳು, ಕೋವಿಡ್ ಆಸ್ಪತ್ರೆಗಳು ಕಡ್ಡಾಯವಾಗಿ ವ್ಯವಸ್ಥಿತ ದಾಖಲಿಕರಣಗೊಳಿಸಬೇಕು. ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಸಕಾಲಕ್ಕೆ ಚಿಕಿತ್ಸೆ ವದಗಿಸಬೇಕು. ಸಾರ್ವಜನಿಕರು ಕೂಡಾ ಸೂಕ್ತ ಸಮಯಕ್ಕೆ ಮಾಹಿತಿ ನೀಡಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗ ಚಿಕಿತ್ಸೆಗೆ ಒಳಪಡುತ್ತಿರುವ ಕೋವಿಡ್-19 ಪಾಸಿಟಿವ್ ಪ್ರಕರಣ ರೋಗಿಗಳಿಗೆ ಸಂಪೂರ್ಣ ಗುಣಮುಖರಾಗುವವರೆಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ನೆಗೆಟಿವ್ ಕಂಡುಬಂದರು ಕೂಡಾ ಎರಡು ಬಾರಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಖಾತ್ರಿಗೊಂಡಾಗ ಮಾತ್ರ ಬಿಡುಗಡೆಗೊಳಿಸಬೇಕು. ಅದರಂತೆ ಕೋವಿಡ್ ಜೊತೆಗೆ ಇತರೆ ಖಾಯಿಲೆಗಳ ಸಮರ್ಪಕ ಚಿಕಿತ್ಸೆ ಮತ್ತು ರೋಗಿಯ ಗುಣಮುಖ ಆಧಾರದ ಮೇಲೆ ಆಸ್ಪತ್ರೆಗಳಿಂದ ಬಿಡುಗಡೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ನಗರ, ರತ್ನಾಪುರಗಳಲ್ಲಿ ದೃಡಪಟ್ಟ ರೋಗಿಗಳ ಪ್ರಾಥಮಿಕ ಸಂಪರ್ಕಗಳ ಪ್ರತಿಯೊಂದು ಆಯಾಮಗಳ ಮೇಲೆ ನಿಗಾ ಇಡಬೇಕು. ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರು ಮತ್ತು ಸಿಬ್ಬಂಧಿಗಳಲ್ಲಿ ಆತ್ಮ ವಿಶ್ವಸದ ಜೊತೆಗೆ ತಮ್ಮ ಸುರಕ್ಷತೆಯೊಂದಿಗೆ ಸೇವೆ ಸಲ್ಲಿಸಬೇಕು. ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವ ಎಎನ್ಎಂ ಕಂಡೆನ್ಮೆಂಟ್ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರು, ಗಬರ್ೀಣಿಯರು, ಎಚ್.ಐ,ವಿ, ಟಿ,ಬಿ, ಡಯಾಬಿಟಿಸ್ ರೋಗಿಗಳ ಬಗ್ಗೆ ಹಾಗೂ ಲಕ್ಷಣ ಒಳ್ಳವರ ಬಗ್ಗೆ ಪಟ್ಟಿ ಒದಗಿಸಬೇಕು. ಲಕ್ಷಣಗಳು ಇರುವ ರೋಗಿಗಳಿಗೆ ಆಕ್ಸಿಜನ್ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಜಿಲ್ಲಾ ಸವರ್ೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಡಾ. ಲಕ್ಕಣ್ಣವರ್, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.