ಶಿರಗುಪ್ಪಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಕಬ್ಬಿನ ಅಧಿಕ ಇಳುವರಿ ವಿಚಾರ ಸಂಕಿರಣ; ಕಬ್ಬು ಬೆಳೆಯ ಸೂಕ್ತ ನಿರ್ವಹಣೆಯಿಂದ ಅಧಿಕ ಇಳುವರಿ: ಡಾ. ನೂಲಿ..!

ಶಿರಗುಪ್ಪಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಕಬ್ಬಿನ ಅಧಿಕ ಇಳುವರಿ ವಿಚಾರ ಸಂಕಿರಣ; ಕಬ್ಬು ಬೆಳೆಯ ಸೂಕ್ತ ನಿರ್ವಹಣೆಯಿಂದ ಅಧಿಕ ಇಳುವರಿ: ಡಾ. ನೂಲಿ..! Seminar on soil health and high sugarcane yield in Shiraguppi; High yield through proper management

ಲೋಕದರ್ಶನ ವರದಿ 

ಕಾಗವಾಡ 16 :  ಉತ್ತಮ ತಳಿಯ ಆಯ್ಕೆ, ನೀರಿನ ಸೂಕ್ತ ಬಳಿಕೆ, ಸಾವಯವ ಗೊಬ್ಬರಗಳ ಉಪಯೋಗ, ಮಣ್ಣು ಪರೀಕ್ಷೆಯಿಂದ ಮಣ್ಣಿನ ಗುಣ ತಿಳಿದುಕೊಂಡು ಉತ್ತಮ ನಿರ್ವಹಣೆ ಮಾಡಿದಲ್ಲಿ ಎಕರೆಗೆ 100 ಟನ್ ಕಬ್ಬು ಬೆಳೆಯಬಹುದಾಗಿದೆ ಎಂದು  ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ಡಾ. ಎಸ್‌.ಎಸ್‌. ನೂಲಿ ತಿಳಿಸಿದ್ದಾರೆ.

ಅವರು, ರವಿವಾರ ದಿ. 15 ರಂದು ಸಂಜೆ ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ 1008 ಪಾರ್ಶನಾಥ ಸಭಾಭವನದಲ್ಲಿ ಶಿರಗುಪ್ಪಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ಬೆಂಗಳೂರಿನ ಕ್ರಿಜಾಜೆನ್ ಸಂಸ್ಥೆ ಮತ್ತು ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ಮಣ್ಣಿನ ಆರೋಗ್ಯದ ಮಹತ್ವ ಮತ್ತು ಕಬ್ಬಿನಲ್ಲಿ ಅಧಿಕ ಇಳುವರಿ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಚಾರ ಸಂಕಿರಣವನ್ನು ಸಸಿಗೆ ನೀರೇರೆದು ಚಾಲನೆ ನೀಡಿ, ಮಾತನಾಡುತ್ತಿದ್ದರು.

ಕಾಗವಾಡ ತಾಲೂಕಿನ ಜಮೀನು ಕಬ್ಬು ಬೆಳೆಗೆ ಅತ್ಯಂತ ಉತ್ತಮವಾಗಿದ್ದು, ಇಲ್ಲಿಯ ರೈತರು ಅತೀ ಹೆಚ್ಚು ಕಬ್ಬು ಬೆಳೆಯುತ್ತಾರೆ. ಆದರೇ ಹೆಚ್ಚು ಇಳುವರಿ ಪಡೆದುಕೊಳ್ಳುವಲ್ಲಿ ನಿರುತ್ಸಾಹ ತೋರುತ್ತಿದ್ದಾರೆ. ತಮ್ಮ ಜಮೀನುಗಳ ಮಣ್ಣು ಪರೀಕ್ಷೆ ಮಾಡಿಸಿಕೊಂಡು, ಮಣ್ಣಿನಲ್ಲಿ ಇರುವ ಕೊರತೆಗಳನ್ನು ನಿವಾರಿಸಿ, ವೈಜ್ಞಾನಿಕ ಪದ್ಧತಿಯಿಂದ ನಾಟಿ ಮಾಡಿ, ನೀರನ್ನು ಯೋಗ್ಯ ರೀತಿಯಲ್ಲಿ ಕಬ್ಬಿಗೆ ನೀಡಿ, ಕಳೆ ನಿರ್ವಹಣೆ, ಸಾವಯವ, ಹಸಿರು ಗೊಬ್ಬರಗಳ ಬಳಿಕೆ ಮಾಡಿದಲ್ಲಿ ಹೆಚ್ಚು ಇಳುವರಿ ಪಡೆದುಕೊಳ್ಳಬಹುದು ಎಂದರು. 

ಕ್ರಿಯಾಜೆನ್‌ನ ಬೇಸಾಯ ತಜ್ಞ ಡಾ. ಸುನೀಲ ಕುಮಾರ ಕೆ., ಮಾತನಾಡಿ, ರೈತರು ತಮ್ಮ ಜಮೀನುಗಳ ಮಣ್ಣು ಪರೀಕ್ಷೆ ಹೇಗೆ ಮಾಡಿಸಬೇಕು. ಪರೀಕ್ಷೆಗೆ ಮಣ್ಣು ಸಂಗ್ರಹಿಸುವ ಸಮಗ್ರ ಮಾಹಿತಿ ನೀಡಿದರು. ಅಲ್ಲದೇ ನಮ್ಮ ಕಂಪನಿಯಿಂದ ರೈತರಿಗೆ ಉಚಿತವಾಗಿ ಮಣ್ಣು ಪರೀಕ್ಷೆ ಮಾಡಿ ಕೊಡಲಾಗುತ್ತಿದ್ದು, ರೈತರಯ ಇದರ ಲಾಭ ಪಡೆದುಕೊಳ್ಳಬೇಕೆಂದರು. ಈ ಸಮಯದಲ್ಲಿ ಪಿಕೆಪಿಎಸ್ ಅಧ್ಯಕ್ಷ ಸುರೇಶ ಚೌಗುಲೆ,

ಉಪಾಧ್ಯಕ್ಷ ಶುಭಂ ಕಾಟಕರ, ಸದಸ್ಯರಾದ ಅಭಯಕುಮಾರ ಅಕಿವಾಟೆ, ರುದ್ರಗೌಡಾ ಪಾಟೀಲ, ಕಿರಣ ಬೋಲೆ, ಶಿವಾನಂದ ಪಾಟೀಲ, ವಿಜಯ ಅಕಿವಾಟೆ, ಅಪ್ರೋಜ್ ಕನವಾಡೆ, ಮುಕಾರಿ ವಡ್ಡರ, ಅಪ್ಪಾಸಾಬ ಕೋಳಿ, ಜ್ಯೋತಿ ಪುದಾಲೆ, ಸಂಜೀವಿನಿ ಕಾಗವಾಡೆ, ಶೋಭಾ ಶಿರಗುಪ್ಪಿ, ಮುಖ್ಯಕಾರ್ಯನಿರ್ವಾಹಕ ಶ್ರೇಣಿಕ ಮಾಂಗೂರೆ ಸೇರಿದಂತೆ ರೈತ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ರೈತರು ಉಪಸ್ಥಿತರಿದ್ದರು.