ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ ವಿಚಾರ ಸಂಕಿರಣ
Seminar on Ranna Kavi's Contribution to Kannada Literature
ಲೋಕದರ್ಶನ ವರದಿ
ಧಾರವಾಡ 14 : ಪಂಪ, ಪೊನ್ನ, ರನ್ನ ಎಂಬ ರತ್ನತ್ರಯ ಕವಿಗಳು ಕನ್ನಡ ಕಾವ್ಯಕ್ಕೆ ಮೆರಗು ಕೊಟ್ಟವರು ಅದರಲ್ಲೂ ಮುಖ್ಯವಾಗಿ ರನ್ನ ಒಬ್ಬ ದೇಶಿ ಕವಿ. 10ನೇ ಶತಮಾನದ ಕನ್ನಡದ ‘ರತ್ನತ್ರಯ’ ಕವಿಗಳಲ್ಲಿ ಒಬ್ಬರಾದ ರನ್ನ ಕವಿಚಕ್ರವರ್ತಿ ಎಂದೇ ಪ್ರಸಿದ್ಧಿ ಹೊಂದಿದವರು. ಈತನು ಪ್ರಮುಖವಾಗಿ ಅಜಿತನಾಥ ಪುರಾಣ ಜೈನ ಕಾವ್ಯ, ಸಾಹಸಭೀಮ ವಿಜಯಂ ಅಥವಾ ಗದಾಯುದ್ಧ ಎಂಬ ಲೌಕಿಕ ಕಾವ್ಯವನ್ನು ರಚಿಸಿ ಇಡೀ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾನೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ವೈ. ಎಂ. ಭಜಂತ್ರಿ ಹೇಳಿದರು.
ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಧಾರವಾಡ ಇವರ ಸಹಯೋಗದಲ್ಲಿ "ಸಾಹಿತ್ಯ-ಸಂಸ್ಕೃತಿ" ವಿಷಯವಾಗಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಸಮಾರಂಭದಲ್ಲಿ "ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ" ವಿಷಯವಾಗಿ ಮಾತನಾಡಿದ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದೆ ಆದರೆ ನೀರೀಕ್ಷಿಸಿದಷ್ಟು ಬದಲಾವಣೆ ಆಗಿಲ್ಲ, ಹಳೆಗನ್ನಡ ನಶಿಸಿ ಹೋಗುತ್ತಿರುವಾಗ ಯುವಕರು ಆಸಕ್ತಿ ವಹಿಸಿ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯಗಳು ನಡೆಯಬೇಕು ಈ ಕೆಲಸವನ್ನು ಜೈನಶಾಸ್ತ್ರ ಅಧ್ಯಯನ ಪೀಠ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇತಿಹಾಸಕಾರರು, ಶಾಸನ ತಜ್ಞರೂ ಆದ ಶ್ರೀಮತಿ ಹನುಮಾಕ್ಷಿ ಗೋಗಿ ಅವರು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಜೈನ ಕವಿಗಳು. ಹಳಗನ್ನಡದ ಓದು ಇವತ್ತಿನ ಯುವಜನಾಂಗಕ್ಕೆ ಬೇಡವಾಗಿರುವುದು ದುರಂತದ ಸಂಗತಿಯಾಗಿದೆ. ಹಳಗನ್ನಡದಲ್ಲಿ ಸಿಗುವಷ್ಟು ಸಮೃದ್ಧವಾದ ಸಂಸ್ಕೃತಿ, ಸಂಸ್ಕಾರದ ವಿಷಯ ವಿಚಾರಗಳು ಇಂದು ಸಿಗುವುದು ಕಷ್ಟದಾಯಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಂತಿನಾಥ ಹೋತಪೇಟಿ, ಧನಪಾಲ ಮುನ್ನೋಳ್ಳಿ ಉಪಸ್ಥಿತರಿದ್ದರು. ಡಾ. ಲಕ್ಷ್ಮೀ ಕೊಟಗುಣಸಿ ನಿರೂಪಿಸಿದರು. ಡಾ. ನವೀನಶಾಸ್ತ್ರಿ ಪುರಾಣಿಕ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 