ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಗಣಿತ ವಿಷಯದ ವಿಚಾರ ಸಂಕಿರಣ

Seminar on Mathematics held at Zilla Panchayat Hall

 ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಗಣಿತ ವಿಷಯದ ವಿಚಾರ ಸಂಕಿರಣ  

ಧಾರವಾಡ 23: ಕರ್ನಾಟಕ ಸರಕಾರ, ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು (ಡಿ.23) ಗಣಿತ ಕಲಿಕಾ ಆಂದೋಲನದ ಅಂಗವಾಗಿ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತ್ತು.   

 ಜಿಲ್ಲಾ ಪಂಚಾಯತನ ಉಪ ಕಾರ್ಯದರ್ಶಿ ಬಿ. ಎಸ್‌. ಮೂಗನೂರಮಠ ಅವರು  ಕಾರ್ಯಕ್ರಮವನ್ನು ಉದ್ಘಾಟಿಸಿ, ಗಣಿತ ಸ್ಪರ್ಧೆಯ ಜಿಲ್ಲಾ ವರದಿ ಬಿಡುಗಡೆಗೊಳಿಸಿ, ಗಣಿತ ಕ್ಷೇತ್ರದಲ್ಲಿ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಶಿಕ್ಷಣ ಮತ್ತು ಗಣಿತ ವಿಷಯದಲ್ಲಿ ಮಕ್ಕಳ ಪ್ರಗತಿಗಾಗಿ ಎಲ್ಲಾ ಭಾಗೀದಾರರ ಜವಾಬ್ದಾರಿಯೊಂದಿಗೆ ಭೌತಿಕ ಸೌಕರ್ಯ ಒದಗಿಸುವಲ್ಲಿ ಶಿಕ್ಷಣಕ್ಕಾಗಿ ಗ್ರಾಮ ಪಂಚಾಯಿತಿಯವರ ಸಹಕಾರ ಮುಖ್ಯವಿರುತ್ತದೆ ಎಂದರು. 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಡಯಟ್ ಉಪನಿರ್ದೇಶಕಿ ಜಯಶ್ರೀ ಕಾರೇಕರ ಅವರು ಮಾತನಾಡಿ, ಮಕ್ಕಳ ಹಾಜರಾತಿ ಹಾಗೂ ಕಲಿಕಾ ಪ್ರಗತಿ ಕಾಣಲು ಪಾಲಕರ ಮತ್ತು ಮಕ್ಕಳ ಆಸಕ್ತಿ ತುಂಬಾ ಮುಖ್ಯ, ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಸರಕಾರದ ಯೋಜನೆಗಳೊಂದಿಗೆ ಸರಕಾರೇತರ ಸಂಸ್ಥೆಗಳ ಸಹಕಾರದಲ್ಲಿ ಮಕ್ಕಳ ಕಲಿಕಾ ಪ್ರಗತಿ ಸಾಧಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. 

ಅಕ್ಷರ ಫೌಂಡೇಶನ ವಿಭಾಗೀಯ ವ್ಯವಸ್ಥಾಪಕಿ ಅಂಜಲಿನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಷರ ಫೌಂಡೇಶನ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರೀಯವಾಗಿ ತೊಡಗಿಸಿಕೊಂಡು, ಪ್ರಸಕ್ತ ಸಾಲಿಗೆ 25 ವರ್ಷಗಳು ಪೂರೈಸಲಿವೆ. ಜಿಲ್ಲೆಯಲ್ಲಿ ಗಣಿತ ಸ್ಪರ್ಧೆಯಲ್ಲಿ ಉತ್ತಮ ಫಲಿತಾಂಶ ಪಡೆದ 25 ಶಾಲೆಗಳಿಗೆ ಮತ್ತು 25 ಗ್ರಾಮ ಪಂಚಾಯತಿಗಳಿಗೆ ಸನ್ಮಾನಿಸಲಾಗುತ್ತಿದೆ. ಮತ್ತು ಗಣಿತ ಕಲಿಕಾ ಆಂದೋಲನದ ಗಣಿತ ಸ್ಪರ್ಧೆಯ ವಿವರ ಬಿಡುಗಡೆ ಮಾಡಿ, ಮಕ್ಕಳ ಗಣಿತ ಕಲಿಕೆಯ ಪ್ರಗತಿಯ ಕುರಿತು ಮಾತನಾಡಿದರು.  

ನಂತರ ಗಣಿತ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತನ ಸಹಾಯಕ ಕಾರ್ಯದರ್ಶಿ ಅಜಯ ಎನ್, ಗಣಿತ ಕಲಿಕಾ ಆಂದೋಲನದ ಜಿಲ್ಲಾ ನೋಡಲ್ ಅಧಿಕಾರಿ ಡಯಟ್‌ನ ರಮೇಶ ಯರಳಿ, ಹಿರಿಯ ಶಿಕ್ಷಕರಾದ ವಿ.ಎಫ್‌.ಚುಳಕಿ, ರಾಜಶೇಖರ ಹೊನ್ನಪ್ಪನವರ, ಬಮ್ಮಿಗಟ್ಟಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಂಜುನಾಥ ಧೂಳಿಕೊಪ್ಪ ಅವರು ಪಾಲ್ಗೊಂಡು ಮಾತನಾಡಿದರು.  

 ಕಾರ್ಯಕ್ರಮದಲ್ಲಿ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ, ಉಮಾದೇವಿ ಬಸಾಪೂರ, ಮಹಾದೇವಿ ಮಾಡಲಗೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್‌.ಕೆ.ಎಫ್, ಸಂತೋಷ ದಂಡಗಲ್, ಸುಜಾತ ಚವ್ಹಾಣ ಪಾಲ್ಗೊಂಡಿದ್ದರು.  

ಅಕ್ಷರ ಫೌಂಡೇಶನ್ ಜಿಲ್ಲಾ ಸಂಯೋಜಕ ಹನಮಂತಮ ಸಾಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅರುಣ ನವಲೂರ ಅವರು ಸ್ವಾಗತಿಸಿದರು. ರವಿರಾಜಾ ಬ್ಯಾಹಟ್ಟಿ, ಎಮ್‌.ಎಸ್‌.ಚಿಕ್ಕನಗೌಡರ, ಸಂತೋಷ ಸಂಗನವರ ಅವರು ಸನ್ಮಾನಿತ ಶಾಲೆಗಳ ವಿವರ ಪ್ರಸ್ತುತ ಪಡಿಸಿದರು.   

ಕಾರ್ಯಕ್ರಮದಲ್ಲಿ ಗಣಿತ ವಿಷಯದಲ್ಲಿ ಉತ್ತಮ ಸಾಧನೆ ಮಾಡಿರುವ 25 ಶಾಲೆಯ ಮುಖ್ಯ ಶಿಕ್ಷಕರು, 25 ಗ್ರಾಮ ಪಂಚಾಯತ್ ಅದ್ಯಕ್ಷರು, ಪಿ.ಡಿ,ಓ, ಇತರೆ ಅಧಿಕಾರಿಗಳು, ಸಮುದಾಯದವರು ಭಾವಹಿಸಿ, ಯಶಸ್ವಿಗೊಳಿಸಿದರು.