ಮೊಬೈಲ್ ಆ್ಯಪ್ ಮೂಲಕ ಜೂನ್ ನಲ್ಲಿ 3 ಲಕ್ಷಕ್ಕೂ ಹೆಚ್ಚು ಕಾಗದ ರಹಿತ ಸೀಟು ಕಾಯ್ದಿರಿಸದಿರುವಿಕೆ ಟಿಕೆಟ್ ಮಾರಾಟ

  ಹೈದರಾಬಾದ್, ಜುಲೈ 15 (ಯುಎನ್ಐ) ಮೊಬೈಲ್ ಆ್ಯಪ್ ಮೂಲಕ ಕಾಗದರಹಿತ ಸೀಟು ಕಾಯ್ದಿರಿಸದ ಟಿಕೆಟ್ ಜೂನ್ ತಿಂಗಳಲ್ಲಿ ದಾಖಲೆಯ ಮಾರಟ ಕಂಡಿದೆ ಎಂದು ರೈಲ್ವೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.   ಜೂನ್ ತಿಂಗಳಲ್ಲಿ ದಾಖಲೆಯ 3.87 ಲಕ್ಷ ಟಿಕೆಟ್ ಗಳು ಮೊಬೈಲ್ ಆಪ್ ಮೂಲಕ ಮಾರಾಟವಾಗಿದ್ದು ರೈಲು ಪ್ರಯಾಣಿಕರು ಆ್ಯಪ್ ಬಳಕೆಗೆ ಆಸಕ್ತಿ ತೋರಿದ್ದಾರೆ.  2018 ರ ಏಪ್ರಿಲ್ ನಲ್ಲಿ ಈ ಆ್ಯಪ್ ಬಿಡುಗಡೆಯಾದಾಗ 60 ಸಾವಿರ ಪ್ರಯಾಣಿಕರು ಇದರ ಮೂಲಕ ಟಿಕೆಟ್ ಪಡೆಯುತ್ತಿದ್ದು ಇದೀಗ ಈ ಸಂಖ್ಯೆ 3.87 ಲಕ್ಷಕ್ಕೆ ಹೆಚ್ಚಳ ಕಂಡಿದೆ.   ಶೇಕಡ 545 ರಷ್ಟು ಏರಿಕೆ ಕಂಡಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಟಲೀಕರಣದತ್ತ ದಾಪುಗಾಲಿರಿಸಿದೆ. ಈ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದಾದ ಸೌಲಭ್ಯದಿಂದಾಗಿ ಕೌಂಟರ್ ಗಳಲ್ಲಿ ದಟ್ಟಣೆ ತಗ್ಗಿದೆ. ಕಾಗದ ರಹಿತ ವ್ಯವಹಾರದಿಂದಾಗಿ ಹಸಿರು ಪರಿಸರಕ್ಕೂ ಪೂರಕವಾಗಿದೆ. ಈ ಆ್ಯಪ್ ಮೂಲಕ ಪ್ರಯಾಣಿಕರು ರಿಸರ್ವೆಷನ್ ಇಲ್ಲದ ಟಿಕೆಟ್, ಫ್ಲಾಟ್ಫಾರಂ ಟಿಕೆಟ್ ಪಡೆಯಬಹುದಾಗಿದೆ. ರೈಲ್ವೆ ವ್ಯಾಲೆಟ್ ಹೊಂದುವ ಮೂಲಕ ಪ್ರತಿ ರೀಚಾರ್ಚ್  ಮೇಲೂ ಶೇ 5 ಬೋನಸ್ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ