ಸೌತಾಂಪ್ಟನ್, ಜೂನ್ 29: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಫಿಲ್ ಸಿಮನ್ಸ್, ಅಲ್ಪಾವಧಿಯ ರಜೆಗಾಗಿ ತಂಡವು ಜೈವಿಕ ಸುರಕ್ಷಿತಾ ಸ್ಥಳ ಮ್ಯಾಂಚೆಸ್ಟರ್ ಗೆ ತೆರಳಿದ ನಂತರ ಸ್ವಯಂ ನಿರ್ಬಂಧನಕ್ಕೊಳಪಟ್ಟಿದ್ದರು ಎಂಬ ಅಂಶ ವರದಿಯಾಗಿದೆ.ಮ್ಯಾಂಚೆಸ್ಟರ್ ನಲ್ಲಿ ತಂಡವು ಒಗ್ಗೂಡುವ ಮುನ್ನ ತಮ್ಮ ಮಾವನ ಅಂತ್ಯಕ್ರಿಯೆಯಲ್ಲಿ ಸಿಮನ್ಸ್ ಪಾಲ್ಗೊಂಡಿದ್ದರು. ಇದಕ್ಕೆ ತಂಡದ ವೈದ್ಯಕೀಯ ಅಧಿಕಾರಿಗಳ ಅನುಮತಿ ಪಡೆದಿದ್ದರು. ಶುಕ್ರವಾರ ಮರಳಿದ ನಂತರ ಸಿಮನ್ಸ್ ಅವರಿಗೆ ನಡೆಸಲಾದ ಎರಡು ಬಾರಿಯ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಖಚಿತಪಡಿಸಿದೆ. ತಂಡಕ್ಕೆ ಸೇರ್ಪಡೆಯಾಗುವ ಮುನ್ನ ಅವರು ಬುಧವಾರ ಮತ್ತೆ ಸೋಂಕು ಪರೀಕ್ಷೆಗೆ ಒಳಗಾಗಲಿದ್ದಾರೆ.ಜುಲೈ 8ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಗೂ ಮುನ್ನ ವೆಸ್ಟ್ ಇಂಡೀಸ್ ತಂಡ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಸೋಮವಾರದಿಂದ ಇಂಗ್ಲೆಂಡ್ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.