ರಾಣೇಬೆನ್ನೂರು: ಏ.20: ಆಧುನಿಕ ಕೃಷಿಗೆ ಭಾರತ ದೇಶವು ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ. ಹಸಿರು ಕ್ರಾಂತಿಯ ಪರಿಣಾಮ ಅಧಿಕವಾಗಿ ಆಹಾರ ಉತ್ಪಾದನೆಯನ್ನು ಕಾಣುತ್ತಿದ್ದೇವೆ. ಇದರಿಂದ ಭಾರತ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಆಥರ್ಿಕವಾಗಿ ಸಫಲತೆ ಕಾಣುತ್ತಲಿದೆ ಎಂದು ರಾಜ್ಯ ಜಾಗೃತ ಕೋಶದ ಅಫರ್ ಕೃಷಿ ನಿದರ್ೇಶಕ ಡಾ|| ಅನೂಪ್ ಹೇಳಿದರು.
ಅವರು ಸೋಮವಾರ ಸಂಜೆ ಇಲ್ಲಿನ ತಾಲೂಕಾ ಪಂಚಾಯತ್ ಸಭಾಭವನದಲ್ಲಿ 2020-21ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರ ಮುಂಗಾರು ಹಂಗಾಮು ಪೂರ್ವ ಕಾಯರ್ಾಗಾರ ಮತ್ತು ಬೀಜ ಅಧಿನಿಯಮ ರಸಗೊಬ್ಬರ ನಿಯಂತ್ರಣ ಕಾಯ್ದೆ ಹಾಗೂ ಕೀಟ ನಾಶಕ ಕಾಯ್ದೆ ಕುರಿತು ನಡೆದ ತರಬೇತಿ ಕಾಯರ್ಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ವ್ಯಾಪಾರಸ್ಥರು ಇತಿಹಾಸದಿಂದಲೂ ಕೃಷಿ ಇಲಾಖೆಯ ಮತ್ತು ರೈತರ ಒಡನಾಡಿಗಳು ವ್ಯಾಪಾರ ಧರ್ಮವನ್ನು ಅಳವಡಿಸಿಕೊಂಡು ಸಾಗಿದಾಗ ಮಾತ್ರ ಈ ದೇಶದ ಮತ್ತು ನಾಡಿನ ರೈತರ ಹಿತಾಶಕ್ತಿ ಕಾಯ್ದುಕೊಳ್ಳುವಂತಾಗುತ್ತದೆ. ಭೂಮಿ ಅಷ್ಟೇ ಇದೆ ಆದರೆ, ಮಾರಾಟಗಾರರು ಅಧಿಕವಾಗಿ ಮತ್ತು ಸ್ಪಧರ್ಾತ್ಮಕವಾಗಿ ಬೆಳೆದಿದ್ದರಿಂದಲೇ, ಇಂದು ಗುಣಮಟ್ಟದ ಸೇವೆ ಇಲ್ಲದೇ, ರೈತರು ಅನೇಕ ರೀತಿಯಲ್ಲಿ ಸಂಕಷ್ಠವನ್ನು ಎದುರಿಸುತ್ತಿದ್ದಾರೆ. ವ್ಯಾಪಾರಿಗಳು ಅತ್ಯಂತ ಪ್ರಾಮಾಣಿಕತೆಯಿಂದ ಅವರಿಗೆಖುಲ್ಲಾ ಬೀಜಗಳನ್ನು ವಿತರಿಸದೇ, ಉತ್ತಮ ಗುಣಮಟ್ಟದ ಕಂಪನಿಯ ಬೀಜಗಳನ್ನು ವಿತರಿಸಿ ಅವರನ್ನು ಆಥರ್ಿಕ ಮಟ್ಟಕ್ಕೆ ಏರಿಸಲು ಮುಂದಾಗಬೇಕು ಎಂದರು.
ವ್ಯಾಪಾರಸ್ಥರೂ ಸಹ ಶೇ.90ರಷ್ಟು ರೈತರೇ ಆಗಿದ್ದಾರೆ. ಸ್ವತ: ರೈತರಾಗಿರುವ ವ್ಯಾಪಾರಸ್ಥರು ರೈತರ ಹಿತಾಶಕ್ತಿಯನ್ನು ಕಾಯದೇ, ಅವರನ್ನು ಶೋಷಣೆಗೊಳಪಡಿಸುವುದು ಯಾವ ನ್ಯಾಯ ಎಂದು ಬಲವಾಗಿ ಪ್ರಶ್ನಿಸಿದ ಡಾ|| ಅನೂಪ್ ಅವರು ಕೃಷಿ ಸಚಿವರು ಕಡ್ಡಾಯವಾಗಿ ಖುಲ್ಲಾ ಬೀಜಗಳನ್ನು ಮಾರಬಾರದು ಮತ್ತು ಅಂತಹ ಕೆಲಸದಲ್ಲಿ ತೊಡಗಿದವರ ಮೇಲೆ ನಿಧರ್ಾಕ್ಷಿಣ್ಯ ಕ್ರಮ ತೆಗೆದುಕೊಂಡು ಅಂಗಡಿ ಪರವಾನಗಿಯನ್ನು ರದ್ದುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಇನ್ನುಮುಂದೆ ಇಲಾಖೆ ಕ್ರಮ ಕೈಗೊಳ್ಳುವುದು ಅನಿವರ್ಾಯವಾಗುತ್ತದೆ ಎಂದು ಎಚ್ಚರಿಸಿದರು.
ರಾಣೇಬೆನ್ನೂರು ವಾಣಿಜ್ಯ ನಗರವು ತನ್ನ ಬೀಜೋತ್ಪಾದನೆಯ ಮೂಲಕ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದೆ. ಯಾರೋ ಕೆಲವರು ಮಾಡುವ ತಪ್ಪಿಗೆ ಎಲ್ಲರೂ ಹೊಣೆಗಾರರಾಗಬಾರದು. ಕಾನೂನಾತ್ಮಕವಾಗಿ ವ್ಯಾಪಾರ ನಡೆಸಿ ರೈತರ ಉದ್ಧಾರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಲಾಭದ ಆಸೆಗಾಗಿ ರೈತರನ್ನು ವಂಚಿಸಬಾರದುಎಂದರು.
ಬೆಳಗಾವಿ ವಿಭಾಗದ ಜಾಗೃತ ಕೋಶದ ಡಾ|| ಎಸ್.ಎಸ್.ಪಾಟೀಲ ಅವರು ಮಾತನಾಡಿ ಕರೋನಾ ವೈರಸ್ ಹಾವಳಿ ಒಂದು ಕಡೆ ಸಕಾಲಕ್ಕೆ ಮಳೆ ಯಾಗದೇ, ಬೆಳೆ ಕಾಣದೇ, ಮಳೆಯಾದರೂ ಸರಿಯಾಗಿ ಬೆಳೆಬಾರದೇ, ಬೆಳೆ ಬಂದರೂ ಬೆಲೆ ಸರಿಯಾಗಿ ಸಿಗದೇ ಈ ನಾಡಿನ ರೈತ ಸಮುದಾಯ ಕಳೆದ ಐದಾರು ವರ್ಷಗಳಿಂದ ಅನೇಕ ರೀತಿಯಲ್ಲಿ ಆಥರ್ಿಕ ಸಂಕಷ್ಟವನ್ನು ಎದುರಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಅವರನ್ನು ವಂಚಿಸಿದೇ, ಗುಣಮಟ್ಟದ ಬೀಜ-ಗೊಬ್ಬರಗಳನ್ನು ವಿತರಿಸಿ ರೈತರನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಬೇಕು ಎಂದರು.ಈಗಾಗಲೇ ಜಾಗೃತ ಕೋಶವು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚರಿಸಿ ರೈತರನ್ನು ಯಾವ ರೀತಿ ವಂಚಿಸುತ್ತಿದ್ದಾರೆ ಎನ್ನುವ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗಿದೆ. ನಗರದ ಕೆಲವು ವ್ಯಾಪಾರಸ್ಥರು ಕಳಪೆ ಮತ್ತು ಖುಲ್ಲಾ ಬೀಜಗಳನ್ನು ನೀಡಿ ರೈತರನ್ನು ವಂಚಿಸುತ್ತಲೇ ಬಂದಿದ್ದಾರೆ. ಇದು ಕಡ್ಡಾಯವಾಗಿ ಅನುಸರಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಂಟಿ ಕೃಷಿ ನಿದರ್ೇಶಕ ಡಾ|| ಬಿ.ಮಂಜುನಾಥ ಅವರು ಉತ್ತರ ಕನರ್ಾಟಕದಲ್ಲಿನ ಭೂಮಿಯ ಗುಣಧರ್ಮ ಉತ್ತಮವಾಗಿದೆ. ಇಲ್ಲಿನ ಹವಾಮಾನಕ್ಕೆ ತಕ್ಕಂತೆ ಹೈಬ್ರೀಡ್ ಬಳಕೆ ಅಧಿಕವಾಗಿ ಬೆಳವಣಿಗೆ ಕಂಡಿದೆ. ತೋಟಗಾರಿಕೆ ಉತ್ಪನ್ನಗಳು ಅಧಿಕ ಲಾಭವನ್ನು ಕೊಡುತ್ತಲಿದೆ. ಮತ್ತು ರೈತರು ಆಥರ್ಿಕ ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ಹತ್ತಿಬೆಳೆಯಲ್ಲಿ 2ನೇ ಸ್ಥಾನದಲ್ಲಿದ್ದ ರಾಜ್ಯವೂ ಇದೀಗ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಹತ್ತಿಬೆಳೆಯೂ ಸಹ ಕಡಿಮೆಯಾಗಿದೆ ಎಂದು ಹೇಳಿದರು ಸಂಘದ ಕಾರ್ಯದಶರ್ಿ ಬಾಬಣ್ಣ ಐರಣಿಶೆಟ್ಟರ, ಜಾಗೃತಕೋಶದ ಉಪಕೃಷಿ ನಿದರ್ೇಶಕ ಡಾ|| ಬಸವರಾಜ, ಕೃಷಿ ಪರಿಕರ ಮಾರಾಟಗಾರರ ಸಂಘದ ಇನ್ನೋರ್ವ ಅಧ್ಯಕ್ಷ ಮಂಜಣ್ಣ ಕೆ.ಬಿ., ಉಪ-ಕೃಷಿ ನಿಧರ್ೇಶಕಿ ಜಿ.ಸ್ಪೂತರ್ಿ, ಕೃಷಿ ವಿಶ್ವವಿದ್ಯಾನಿಲಯದ ಮುಖ್ಯ ವಿಜ್ಞಾನಿ ಡಾ|| ಅಶೋಕ ಸೇರಿದಂತೆ ಇಲಾಖೆಯ ಅನೇಕ ಅಧಿಕಾರಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂಧಿಗಳು ಮತ್ತು ವ್ಯಾಪಾರಸ್ಥರ ಸಂಘದ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವ್ಯಾಪಾರಸ್ಥರ ಎರಡೂ ಸಂಘಗಳ ಪರವಾಗಿ ಒಟ್ಟು 1.50ಲಕ್ಷ ರೂ.ಗಳ ಚೆಕ್ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಜಿಲ್ಲಾ ಜಂಟಿ ನಿದರ್ೇಶಕರಿಗೆ ವಿತರಿಸಲಾಯಿತು. ಸಹಾಯಕ ಕೃಷಿ ನಿದರ್ೇಶಕ ಹೆಚ್.ಬಿ.ಗೌಡಪ್ಪಳವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.