ಲೋಕದರ್ಶನವರದಿ
ಮಹಾಲಿಂಗಪುರ: ಸಾಧನೆಗೆ ನಿರಂತರ ಪ್ರಯತ್ನದ ಜೊತೆಗೆ ಸ್ವಯಂ ಪ್ರೇರಣೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ ಬಹಳ ಮುಖ್ಯ ಎಂದು ಪಿಎಸ್ಆಯ್ ದೀಪಾಲಿ ಗುಡೋಡಗಿ ಹೇಳಿದರು.
ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ. ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಮತ್ತು ವಿದ್ಯಾಥರ್ಿ ಮಾಹಿತಿ ಮತ್ತು ಮಾರ್ಗದರ್ಶನ ಕೋಶದ ವತಿಯಿಂದ ಸ್ಪಧರ್ಾತ್ಮಕ ಪರೀಕ್ಷೆ ಕುರಿತು ಒಂದು ದಿನದ ತರಭೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ದೊಡ್ಡ ಪುಸ್ತಕಗಳನ್ನು ಓದುವುದಕ್ಕಿಂತ ಸಾಮಾನ್ಯ ಪಠ್ಯಪುಸ್ತಕಗಳನ್ನು ಓದಿದರೇ ಸಾಕು.
ನಮಗೆ ಮೊದಲು ಒಂದು ತಳಪಾಯ ಸಿಕ್ಕಂತಾಗುತ್ತದೆ. ಸ್ಪಧರ್ಾತ್ಮಕ ಪರೀಕ್ಷೆಯ ಕುರಿತು ತಯಾರಿ ನಡೆಸುವವರು, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ನಿರಂತರ ಅಭ್ಯಾಸದಲ್ಲಿ ತೊಡಗಬೇಕೆಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಸಹೋದರಿ ರೂಪಾಲಿ ಮಾತನಾಡಿ, ವಿದ್ಯಾಥರ್ಿಗಳು ಪದವಿಯಲ್ಲಿರುವಾಗಲೇ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು.
ಹಣೆಬರಹ ಎಂದು ನಿಂತು ನೀರಾಗದೇ ನಿರಂತರ ಪ್ರಯತ್ನದ ಮೂಲಕ ನೀರಿನ ಹಾಗೇ ಸದಾ ಹರಿಯುತ್ತಿರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಮಾತನಾಡಿ, ಪಿಎಸ್ಆಯ್ ಹುದ್ದೆ ಒಂದು ಸವಾಲಿನ ಕೆಲಸವಾಗಿದ್ದು, ಧೈರ್ಯ ಸಾಹಸ ಪ್ರವೃತ್ತಿ ಅಗತ್ಯ.
ರೂಪಾಲಿ ಮತ್ತು ದೀಪಾಲಿ ಸಹೋದರಿಯರು ಸಮಾಜಕ್ಕೆ ಮಾದರಿ. ಒಂದೇ ಕುಟುಂಬದ ಇಬ್ಬರು ಸಹೋದರಿಯರ ಸಾಧನೆ ಮಹತ್ವದ್ದು ಎಂದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ಎಸ್.ಪಾಟೀಲ, ವ್ಹಿ.ಎ.ಅಡಹಳ್ಳಿ ಮತ್ತು ಉಪನ್ಯಾಸಕರಾದ ಟಿ.ಡಿ.ಡಾಂಗೆ, ಆಯ್ ಕ್ಯೂ ಎ ಸಿ ಸಂಯೋಜಕ ಕೆ.ಎಂ.ಅವರಾದಿ ಹಲವರು ಇದ್ದರು.