ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬೈಲಹೊಂಗಲ: ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವದರಿಂದ   ಹಲವಾರು ಪ್ರಯೋಜನಗಳಿವೆ ಎಂದು ಬೈಲಹೊಂಗಲ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಸಮೀರ ಮುಲ್ಲಾ ಹೇಳಿದರು.

     ತಾಲೂಕಿನ ನೇಸರಗಿ ಗ್ರಾಮದ ಸರಕಾರಿ ಕುವೆಂಪು ಮಾದರಿ ಶಾಲೆಯಲ್ಲಿ ಬುಧುವಾರ ಆರೋಗ್ಯ ಇಲಾಖೆ, ಜಿ.ಪಂ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾ.ಪಂ ಅವರ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ರಕ್ತದಾನ ಮಾಡುವದರಿಂದ ರಕ್ತ ಶುದ್ಧವಾಗುತ್ತದೆ. ದೇಹವನ್ನು ಸದೃಡಗೊಳಿಸುತ್ತದೆ. ರಕ್ತದ ಸೆಲ್ಸ್ಗಳು ಹೆಚ್ಚಾಗಲು ಕಾರಣವಾಗುತ್ತದೆ. ರಕ್ತದ ಕೊರತೆ ಇರುವವರಿಗೆ ರಕ್ತದಾನದಿಂದ ಸಹಕಾರಿ ಎಂದರು.

    ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ ಮಾತನಾಡಿ, ಎಲ್ಲ ದಾನಗಳಲ್ಲಿ ರಕ್ತದಾನ ಅತ್ಯಂತ  ಶ್ರೇಷ್ಠವಾಗಿದೆ. ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದಾಗಬೇಕು. ಜೀವನಮರಣದಿಂದ ಹೋರಾಡುವ ವ್ಯಕ್ತಿಗೆ ರಕ್ತ ಬಹುಮುಖ್ಯವಾಗುತ್ತದೆ ಎಂದರು.

    ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಗ್ರಾ.ಪಂ ಉಪಾಧ್ಯಕ್ಷೆ ಗಿರಿಜಾ ಗಲಬಿ, ಮುಖ್ಯ ಶಿಕ್ಷಕ ಬಿ.ವಾಯ್.ಬಾಗಲೆ, ಡಾ.ಹೇಮಲತಾ, ಡಾ.ಶ್ರೀದೇವಿ ಬೊಪಾಚೆ, ಪಿಡಿಓ ಸೌಮ್ಯಾ, ವಾಯ್.ಎ.ದಂಡಾಪೂರ, ಈಶ್ವರ ತುಳಜನ್ನವರ, ಬಸವರಾಜ ಪಂಗನ್ನವರ, ಆಶಾ, ಅಂಗನವಾಡಿ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.