ಬಳ್ಳಾರಿ,ಏ.15: ಕರೋನಾ ವೈರಸ್ ಹರಡದಂತೆ ಜಿಲ್ಲೆಯಾದ್ಯಂತ ಲಾಕ್ಡೌನ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ ಆಸ್ಪತ್ರೆ ರೋಗಿಗಳಿಗೆ ರಕ್ತದ ಅಭಾವವಿರುವುದರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ವಿಮ್ಸ್ನ ನಿದರ್ೆಶಕರಾದ ದೇವಾನಂದ್ ಅವರ ನೇತೃತ್ವದಲ್ಲಿ ಬುಧವಾರ ವಿಮ್ಸ್ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ 10ಕ್ಕೂ ಹೆಚ್ಚು ರೇಡ್ಕ್ರಾಸ್ ಸ್ವಯಂಸೇವಕರು ರಕ್ತದಾನ ಮಾಡಿದರು.
ವಿಮ್ಸ್ ನಿದರ್ೆಶಕರಾದ ದೇವಾನಂದ್ ಅವರು ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ರಕ್ತ ಅವಶ್ಯಕತೆಯಿರುವ ಹಿನ್ನಲೆಯಲ್ಲಿ ರಕ್ತ ಅಭಾವವಿರುವುದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬಹುದು. ಜಿಲ್ಲೆಯಾದ್ಯಂತ ಲಾಕ್ಡೌನ್ ಇರುವುದರಿಂದ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಇಚ್ಛಿಸುವುವರು ಈ ಕಾರ್ಯಕ್ರಮದ ಸಂಯೋಜಕರಾದ ಹರಿಶಂಕರ್ ಅಗರ್ವಾಲ್ ಅವರ ದೂ.ಸಂ.9886000954 ಇವರನ್ನು ಸಂಪಕರ್ಿಸಿದಲ್ಲಿ ಮನೆಯ ಹತ್ತಿರವೇ ವಾಹನವನ್ನು ಕಳುಹಿಸಲಾಗುವುದು.
ರಕ್ತ ದಾನ ಮಾಡುವ ವ್ಯಕ್ತಿಯನ್ನು ಸ್ಕ್ರೀನಿಂಗ್ ಮಾಡಿಸಿ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಿ ವ್ಯಕ್ತಿಯು ಯಾವುದೆ ರೋಗವಿಲ್ಲದೆ ಸುರಕ್ಷಿತವಾಗಿದ್ದಾನೆ ಎಂದು ತಿಳಿದ ನಂತರವೆ ಅವರ ರಕ್ತವನ್ನು ಸ್ವೀಕರಿಸಲಾಗುತ್ತದೆ ಎಂದರು.
ರಕ್ತದಾನ ಬಳಿಕ ರಕ್ತದಾನಿಗಳಿಗೆ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ವತಿಯಿಂದ ಹಣ್ಣು ಮತ್ತು ಬೀಸ್ಕತ್ ನೀಡಿ ಮನೆಗೆ ಕಳುಹಿಸಲಾಯಿತು. ಈ ಟ್ರಸ್ಟ್ನವರು 15ದಿನಗಲ ಕಾಲ ಹಣ್ಣು,ಹಂಪಲು ಮತ್ತು ಬಿಸ್ಕತ್ ಹಾಗೂ ಇನ್ನೀತರ ಸೌಕರ್ಯಗಳನ್ನು ನೀಡಲು ಮುಂದೆ ಬಂದಿದೆ.
ಈ ಸಂದರ್ಭದಲ್ಲಿ ಡಾ.ಇಂದ್ರಾಣಿ, ಬ್ಲಡ್ ದೇವಣ್ಣ, ರೆಡ್ ಕ್ರಾಸ್ ಕಾರ್ಯದಶರ್ಿ ಎಂ.ಎ.ಷಕೀಬ್ ಸೇರಿದಂತೆ ಹಶ್ರಿತಾ ಅಗರ್ವಾಲ್, ಹಶೀನ್ ಅಗರ್ವಾಲ್, ಶ್ರೀಧರ್ ಕವಾಲಿ, ವಿಷ್ಣು,ಪ್ರದೀಪ್,ಅಶೋಕ ಜೈನ್ ಮತ್ತಿತ್ತರರು ಇದ್ದರು.