ಲೋಕದರ್ಶನವರದಿ
ಗುಳೇದಗುಡ್ಡ23: ಮಾಹಿತಿ ತಂತ್ರಜ್ಞಾನ, ಸೌಂದರ್ಯ ಮತ್ತು ಸ್ವಾಸ್ಥ್ಯ ಐಚ್ಚಿಕ ವಿಷಯಗಳನ್ನು ತೆಗೆದುಕೊಂಡು ಓದುತ್ತಿರುವ ವಿದ್ಯಾಥರ್ಿನಿಯರು ಸುಲಭವಾಗಿ ಉದ್ಯೋಗಕ್ಕೆ ಸೇರಬಹುದಾಗಿದೆ ಎಂದು ಮಂಜುನಾಥ ಕಟ್ಟಿಮನಿ ಹೇಳಿದರು.
ಅವರು ಬುಧವಾರ ಪಟ್ಟಣದ ಬಾಲಕಿಯರ ಸಕರ್ಾರಿ ಪಪೂಕಾಲೇಜಿನ ಪ್ರೌಢಶಾಲಾ ವಿಭಾಗದ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾಥರ್ಿನಿಯರಿಗೆ ಮತ್ತು ಅವರ ಪಾಲಕರಿಗಾಗಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿ, ವಿದ್ಯಾಥರ್ಿನಿಯರು ರಾಷ್ಟ್ರೀಯ ಕೌಶಲ್ಯಭಿವೃದ್ಧಿ ವೃತ್ತಿಪರ ತರಬೇತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಮೆರೆಯಬಹುದು.
ಅಲ್ಲದೇ ಮಲ್ಟಿ ನ್ಯಾಷನಲ್ ಕಂಪನಿಗಳು ಇಂತಹ ತರಬೇತಿ ಪಡೆದವರನ್ನು ಪ್ರತಿ ತಿಂಗಳು ಗೌರವ ಧನದ ಜೊತೆಗೆ ವಿಶೇಷ ತರಬೇತಿ ನೀಡಿ ಉದ್ಯೋಗವದಗಿಸಿಕೊಡುವ ಯೋಜನೆ ಇದಾಗಿದೆ ಎಂದು ಹೇಳಿದರು.
ಉಪಪ್ರಾಚಾರ್ಯ ಮನೋಹರ ಚಲವಾದಿ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಓದುತ್ತಿರುವ ಐಟಿ ಮತ್ತು ಸೌಂದರ್ಯ ವಿಷಯದ ವಿದ್ಯಾಥರ್ಿನಿಯರು ಯೋಜನೆಯ ಸದುಪಯೋಗ ಮಾಡಿಕೊಳ್ಳಲಿ. ಪಾಲಕರು ಇದರ ಬಗ್ಗೆ ಆಸಕ್ತಿ ಮೂಡಿಸಿದರೆ ಮುಂದಿನ ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆ ಮೇಲಿದ್ದ ಪಾಲಕರ ಪ್ರತಿನಿಧಿ ಪ್ರಕಾಶ ಮುರಗೋಡ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಇಂತಹ ಕ್ರಿಯಾತ್ಮಕ ಚಟುವಟಿಕೆಗಳ ಕುರಿತು ಮಾತನಾಡಿ ಹೆಮ್ಮೆ ವ್ಯಕ್ತಪಡಿಸಿದರು. ಸೌಂದರ್ಯ ವಿಷಯ ಬೋಧಕ ಶಿಕ್ಷಕಿ ರೇಷ್ಮಾ ಜಕಾತಿ ಸೌಂದರ್ಯ ಮತ್ತು ಸ್ವಾಸ್ಥ್ಯದ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಸಿ.ಎಂ.ಕುರಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಜಿ.ತಳವಾರ್, ಎಸ್.ಎಸ್.ಪಟ್ಟಣಶೆಟ್ಟಿ, ಎಲ್.ಎಸ್.ಪತ್ತಾರ್, ಎಲ್.ಐ.ಅಂಗಡಿ, ಆರ್.ವಿ.ಬುಳ್ಳಾ ಸೇರಿದಂತೆ ಶಿಕ್ಷಕ ವರ್ಗ ಹಾಗೂ ಪಾಲಕರು ಹಾಜರಿದ್ದರು. ಎಲ್.ಪಿ.ಗುಗ್ಗರಿಗೌಡರ್ ನಿರೂಪಿಸಿದರು. ಪಿ.ಅರ್.ಮೂಲಂಗಿ ವಂದಿಸಿದರು.